ಸಕಲೇಶಪುರದಲ್ಲೂ ಧರಣಿ

28 skpp 1
ವಿವಿಧ ಬೇಢಿಕೆಗಳಿಗೆ ಒತ್ತಾಯಿಸಿ ಪುರಸಭೆ ನೌಕರರು ಪ್ರತಿಭಟನೆ ನಡೆಸಿದರು.
Published on

ಸಕಲೇಶಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪುರಸಭೆ ಮುಂಭಾಗ ಪೌರ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.

ಪಂಚಾಯತ್ ರಾಜ್ ಇಲಾಖೆಯ ಗುತ್ತಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿರುವ ಮಾದರಿಯಲ್ಲೇ ಪುರಸಭೆ ಗುತ್ತಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಹಂತದ ನೌಕರರನ್ನು ನೇರಪಾವತಿ ಪದ್ಧತಿಗೆ ಒಳಪಡಿಸಬೇಕು. ಕಾಯಂ ಪೌರ ನೌಕರರಿಗೆ ನೀಡಲಾಗಿರುವ ಮಾದರಿಯಲ್ಲೇ ಇತರ ನೌಕರರಿಗೂ ಗೃಹಭಾಗ್ಯ ಯೋಜನೆಯನ್ನು ವಿಸ್ತರಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ನೌಕರರು ಶಾಸಕ ಸೀಮೆಂಟ್ ಮಂಜು ಅವರಿಗೆ ಮನವಿ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ನಟರಾಜ್, ಕಂದಾಯ ನಿರೀಕ್ಷಕ ಪ್ರಕಾಶ್, ವ್ಯವಸ್ಥಾಪಕ ಮಹೇಶ್, ಶ್ರೀನಿವಾಸ್, ಅನಿಲ್, ರೇವಣ್ಣ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net