

ನರಗುಂದ: ನರಗುಂದ ತಾಲೂಕು ಹಿರಿಯ ನಾಗರಿಕರ ಹಾಗೂ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೂ. 16ರಂದು ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ಪ್ರಯುಕ್ತ ಅಂದು ಬೆಳಗ್ಗೆ 9.30ಕ್ಕೆ ಸಾಮಾನ್ಯ ಸಭೆ ನಡೆಯಲಿದೆ. ಬಳಿಕ ಪಟ್ಟಣದ ಶಿವಾಜಿ ವರ್ತಲದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಸುವ ಮೂಲಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಂಘದ ತಾಲೂಕಾಧ್ಯಕ್ಷ ಬಿ.ಎಂ. ಬೆಳಹಾರ, ಉಪಾಧ್ಯಕ್ಷ ಬಿ.ಆರ್. ಬ್ಯಾಹಟ್ಟಿ ಹಾಗೂ ಕಾರ್ಯದರ್ಶಿ ಬಿ.ಎಂ. ಅಳಗವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.