

ಮೈಸೂರು: ಕಾವೇರಿಕೊಳ್ಳದ ಜಲಾಶಯಗಳು ಭರ್ತಿಯಾಗದೆ ಇದ್ದರೂ ತಮಿಳುನಾಡು ಒತ್ತಡಕ್ಕೆ ಮಣಿದು ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ಮೈಸೂರು ಕನ್ನಡ ವೇದಿಕೆಯಿಂದ ನಗರದ ರಾಜ್‌ಕುಮಾರ್ ಉದ್ಯಾನ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ರಾಜ್ಯದ ಜನರು ಸ್ಪಷ್ಟ ಬಹುಮತ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದಾರೆ. ಆದರೆ, ಈ ಎರಡು ಪಕ್ಷಗಳಿಂದ ಸಂಕಷ್ಟ ಕಾಲದಲ್ಲಿ ಕನ್ನಡಿಗರಿಗೆ ಪ್ರಯೋಜನವಾಗದೆ ಇರುವುದು ದುದೈರ್ವದ ಸಂಗತಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ರಾಜಕೀಯ ಪಕ್ಷಗಳು ರಾಜ್ಯದ ಜನರು ಹಾಗೂ ರೈತರ ಹಿತ ಕಾಪಾಡುವುದನ್ನು ಬಿಟ್ಟು ರಾಜಕೀಯ ಕಿತ್ತಾಟ, ಆಪರೇಷನ್ ಹಸ್ತದತ್ತ ಚಿತ್ತ ಹರಿಸಿರುವುದು ಖಂಡನೀಯ. ಜಲಾಶಯಗಳು ಭರ್ತಿಯಾಗದೆ ತಮಿಳುನಾಡಿಗೆ ನೀರು ಹರಿಸಬಾರದು ಎಂದು ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಪದಾಧಿಕಾರಿಗಳಾದ ನಾಲಾಬೀದಿರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಮಹದೇವಸ್ವಾಮಿ, ಪ್ಯಾಲೇಸ್‌ಬಾಬು, ಗೋಪಿ, ಸುನೀಲ್, ಎಲ್‌ಐಸಿ ಸಿದ್ದಪ್ಪ, ಗೋವಿಂದರಾಜು, ಬೀಡಾಬಾಬು, ಸ್ವಾಮಿ ಗೈಡ್, ಮಾದಪ್ಪ, ಪುಷ್ಪಾ, ಮಾಲಿನಿ, ಹರೀಶ್, ಕಿಶೋರ್, ಶ್ರೀನಿವಾಸ್, ಮದನ್, ಸ್ವಾಮಿ, ಬಸವರಾಜು ಪಾಲ್ಗೊಂಡಿದ್ದರು.