

ಮೈಸೂರು: ಯುದ್ಧ ವಿರೋಧಿ ದಿನದ ಅಂಗವಾಗಿ ಸಿಪಿಐ, ಸಿಪಿಐ(ಎಂ), ಸಿಪಿಎಐ(ಎಂಎಲ್), ಲಿಬರೇಷನ್ ಎಡಪಕ್ಷಗಳ ಜಂಟಿ ಸಮಿತಿ ವತಿಯಿಂದ ನಗರದ ಗಾಂಧಿ ಚೌಕದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ವಿಶ್ವದಲ್ಲಿ ದೇಶ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಕೊನೆಗಾಣಬೇಕಾಗಿದೆ. ಆ ಮೂಲಕ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಎಲ್ಲರು ಪ್ರಯತ್ನ ಮಾಡಬೇಕು. ಯುದ್ಧದಿಂದ ಹಲವಾರು ಅಮಾಯಕರು ತಮ್ಮ ಜೀವನ ಕಳೆದುಕೊಳ್ಳುತ್ತಿದ್ದು, ಹಲವಾರು ಜನರು ನಿರ್ಗತಿಕರಾಗುತ್ತಿದ್ದಾರೆ. ಹಾಗಾಗಿ ಯುದ್ಧದಲ್ಲಿ ತೊಡಗಿರುವ ದೇಶಗಳು ತಮ್ಮ ಯುದ್ಧ ದಾಹವನ್ನು ಬಿಟ್ಟು ಜನರ ಶ್ರೇಯೋಭಿವೃದ್ದಿಯ ಕಡೆಗೆ ಗಮನ ಹರಿಸಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಎಡಪಕ್ಷಗಳ ಮುಖಂಡರಾದ ಜಯರಾಮ್, ಚೌಡಳ್ಳಿ ಜವರಯ್ಯ, ಜಗನ್ನಾಥ್, ಶೇಷಾದ್ರಿ ಹಾಗೂ ಇತರರು ಪಾಲ್ಗೊಂಡಿದ್ದರು.