ಕ್ಯೂಬಾ ದೇಶದ ಮೇಲೆ ದಿಗ್ಭಂಧನ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ

Protest in Mysore against the embargo on Cuba
Published on

ಮೈಸೂರು: ಕ್ಯೂಬಾ ದೇಶದ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನ ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ವತಿಯಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.

ಸಾಮ್ರಾಜ್ಯಶಾಹಿ ಅಮೆರಿಕ ಸಮಾಜವಾದಿ ತತ್ವದ ಅಡಿಯಲ್ಲಿರುವ ಕ್ಯೂಬಾ ದೇಶದ ಮೇಲೆ ಅಮಾನವೀಯ ದಿಗ್ಬಂಧನ ಹೇರಿದೆ. ಈ ಬಗ್ಗೆ ವಿಶ್ವಸಂಸ್ಥೆಯ ಜನರಲ್ ಕೌನ್ಸಿಲ್‌ನಲ್ಲಿ ಚರ್ಚೆ ನಡೆಯುತ್ತಿದೆ. 31 ವರ್ಷಗಳ ಹಿಂದೆ ವಿಶ್ವಸಂಸ್ಥೆಯ ಜನರಲ್ ಕೌನ್ಸಿಲ್ ಕ್ಯೂಬಾ ದೇಶದ ಮೇಲೆ ಅಮೆರಿಕ ಹೇರಿರುವ ಆರ್ಥಿಕ, ವಾಣಿಜ್ಯ ಹಾಗೂ ಹಣಕಾಸಿನ ನಿರ್ಬಂಧ ತೆಗೆದು ಹಾಕಬೇಕು ಎಂದು ಹೇಳಿದ್ದರೂ ಇದಕ್ಕೆ ಯಾವುದೇ ಮಾನ್ಯತೆ ನೀಡದ ಅಮೆರಿಕ ಎಲ್ಲ ರೀತಿಯ ದಿಗ್ಬಂಧನ ಮುಂದುವರೆಸುತ್ತಿರುವುದು ಖಂಡನೀಯ ಎಂದು ಸಿಐಟಿಯು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಪದಾಧಿಕಾರಿಗಳಾದ ಎನ್.ಕೆ.ಬಾಲಾಜಿರಾವ್, ಜಿ.ಜಯರಾಂ, ಮಹದೇವ, ರಾಘವೇಂದ್ರ, ಸುಬ್ರಹ್ಮಣ್ಯ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net