ಮುತ್ತಗಿಯಲ್ಲಿ ಪ್ರತಿಭಟನೆ

Protest in Muttagi
ಗೊಳಸಂಗಿ ಸಮೀಪದ ಮುತ್ತಗಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ವಿರೋಧಿಸಿ ಬಿಆರ್‌ಪಿ ಅಭಿಮಾನಿ ಬಳಗದ ಕಾರ್ಯಕರ್ತರು ಪ್ರತಿಭಟಿಸಿದರು. ಮಹೇಶ ಬೆಲ್ಲದ, ವಿಶ್ವನಾಥ ಇಂಡಿ ಇತರರಿದ್ದರು.
Published on

ಗೊಳಸಂಗಿ: ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಉಚ್ಚಾಟಿಸಿರುವ ಕ್ರಮ ವಿರೋಧಿಸಿ ಮುತ್ತಗಿ ಗ್ರಾಮದಲ್ಲಿ ಯತ್ನಾಳರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಿಆರ್‌ಪಿ ಅಭಿಮಾನಿ ಬಳಗದ ಅಧ್ಯಕ್ಷ ಮಹೇಶ ಬೆಲ್ಲದ ಮಾತನಾಡಿ, ಬಿಜೆಪಿ ಅಪ್ಪ-ಮಕ್ಕಳ ಪಕ್ಷ ಆಗೋದು ಬೇಡ, ಹೊಂದಾಣಿಕೆ ರಾಜಕಾರಣದ ವಿರುದ್ಧ, ನಕಲಿ ಹಿಂದುಗಳಿಗೆ ನಾಯಕತ್ವ ಬೇಡ ಎಂದು ಹೋರಾಡಿದ ಉತ್ತರ ಕರ್ನಾಟಕದ ಹಿಂದು ಹುಲಿ ಯತ್ನಾಳರನ್ನು ಬಿಜೆಪಿ ಉಚ್ಚಾಟಿಸಿದ್ದು ಸರಿಯಲ್ಲ ಎಂದು ಆರೋಪಿಸಿದರು.

ಯುವ ಮುಖಂಡ ವಿಶ್ವನಾಥ ಇಂಡಿ ಮಾತನಾಡಿ, ಬಿಜೆಪಿ ಕಟ್ಟಲು ಬರೀ ಯಡಿಯೂರಪ್ಪ ಕುಟುಂಬ ಮಾತ್ರ ದುಡಿದಿಲ್ಲ. ಬಿ.ಬಿ.ಶಿವಪ್ಪ, ಅನಂತಕುಮಾರ, ಬಸವರಾಜ ಪಾಟೀಲ ಸೇಡಂ, ಕೆ.ಎಸ್.ಈಶ್ವರಪ್ಪ, ಬಸನಗೌಡ ಪಾಟೀಲ ಯತ್ನಾಳ ಸೇರಿ ಘಟಾನುಘಟಿ ನಾಯಕರು, ಸಾಮಾನ್ಯ ಕಾರ್ಯಕರ್ತರ ಬೆವರಿನ ಪ್ರತಿಲವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಬಿಜೆಪಿ ವರಿಷ್ಠರು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಜರಂಗದಳ ಗ್ರಾಮಘಟಕ ಅಧ್ಯಕ್ಷ ವಿಠ್ಠಲ ಚವ್ಹಾಣ, ಬಿಆರ್‌ಪಿ ಅಭಿಮಾನಿ ಬಳಗದ ಕಾರ್ಯಕರ್ತರಾದ ಚಂದ್ರು ಹೌಜಿ, ವೀರೇಶ ಬಡಿಗೇರ, ಮಂಜುನಾಥ ಹೊಲ್ದೂರ, ಮಂಜು ಕೋಲಕಾರ, ಮುತ್ತು ಮಾಳಜಿ, ಸುದೀಪ ಹೊಸಮನಿ, ನವೀನ ದೇವರಗುಡಿ, ಪರಶುರಾಮ ಹೂಗಾರ, ವೀರೇಶ ಸಿಡಿ, ಮಂಜು ಮೌಡಿ, ಅರವಿಂದ ಅಬ್ಬಿಹಾಳ, ಮಂಜು ಮನಹಳ್ಳಿ, ರುದ್ರು ಒಡೆಯರ, ಮಂಜು ದೇವನಗಾಂವಿ, ಶಿವು ಕುಬಕಡ್ಡಿ, ಮಂಜು ಹೊಟ್ಟಿ, ವೀರೇಶ ಕುಬಕಡ್ಡಿ, ಪುನೀತ ಕುಬಕಡ್ಡಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net