

ಮುಂಡರಗಿ: ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ (ರಿ) ಮುಂಡರಗಿ ರವರ ಆಶ್ರಯದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜನ ಕಲ್ಯಾಣ ಯಾತ್ರೆಯ ಚಳುವಳಿಯ ಪ್ರತಿಭಟನೆಯನ್ನು April ೦೮ ರಂದು ಸೋಮವಾರ ದಿವಸ ಬೆಳಿಗ್ಗೆ ತಹಶೀಲ್ದಾರ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ಮುಂಡರಗಿ ತಹಶೀಲ್ದಾರ್ ಆದ ಧನಂಜಯ್ ಮಾಲಗುತ್ತಿ ರವರ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಶ್ರೀ ಬಸವರಾಜ ಯಲ್ಲಪ್ಪ ನವಲಗುಂದ ಅಧ್ಯಕ್ಷರು ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ (ರಿ) ಮುಂಡರಗಿರವರು ಮಾತನಾಡುತ್ತಾ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ, ಕೊಪ್ಪಳ-ಮುಂಡರಗಿ-ಶಿಗ್ಗಾAವಿ ರಾಷ್ಟ್ರೀಯ ಹೆದ್ದಾರಿ, ಮುಂಡರಗಿ ತಾಲೂಕನ್ನು ವಿಧಾನಸಭಾ ಮತಕ್ಷೇತ್ರ ಎಂದು ಘೋಷಣೆ, ಮುಂಡರಗಿ ಪಟ್ಟಣದಲ್ಲಿ ಅಂಚೆ ಕಚೇರಿ ಜಾಗದಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ, ಕಪ್ಪತ್ತ ಗಿರಿ ಸಂರಕ್ಷಣೆ ಮತ್ತು ಪ್ರವಾಸಿ ತಾಣ ಎಂದು ಘೋಷಣೆ, ಮುಂಡರಗಿ ಕನಕರಾಯನ ಗುಡ್ಡವನ್ನು ಪ್ರವಾಸಿ ತಾಣ ಎಂದು ಘೋಷಣೆ, ಮುಂಡರಗಿ ಪಟ್ಟಣಕ್ಕೆ ಸರ್ಕಾರಿ ಪ್ರೌಢಶಾಲೆ, ಮುರುಡಿ ಸಣ್ಣ ನೀರಾವರಿ ಕೆರೆಯ ಹಿನ್ನೀರಿಗೆ ಮುಳುಗಡೆ ಆದ ರೈತರ ಜಮೀನುಗಳಿಗೆ ಪರಿಹಾರ ಘೋಷಣೆ, ತಾಮ್ರ ಗುಂಡಿ ಸಣ್ಣ ನೀರಾವರಿ ಕೆರೆಗೆ ೨೦೦೭ ರಲ್ಲಿ ಆದ ಭಾರಿ ಮಳೆಗೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ, ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ, ಬಗರ್ ಹುಕುಂ ಹಕ್ಕು ಪತ್ರ ಹಂಚಿಕೆ, ಕಾಯ್ದೆ ೧೯೭೮ ಪುನರ್ ಸ್ಥಾಪನೆ, ಮುಂಡರಗಿ ಪುರಸಭೆ ಕಾರ್ಯಾಲಯದ ವ್ಯಾಪ್ತಿಗೆ ಬರುವ ಶಿರೋಳ ಗ್ರಾಮದ ರಿ.ಸ.ನಂ.೨೪ ರ ೨೫ ಎಕರೆ ೩೨ ಗುಂಟೆ ಕೃಷಿ ಜಮೀನಿನಲ್ಲಿ ೧೦೦೮ ವಿನ್ಯಾಸಗಳ ಆಶ್ರಯ ರಹಿತ ಕುಟುಂಬಗಳಿಗೆ ಹಂಚಿಕೆ, ಮುಂಡರಗಿ ಪಟ್ಟಣದ ೨೩ ವಾರ್ಡ್ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ April ೦೭ ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವನ್ನು ಬಹಿಷ್ಕಾರಿಸಿ ಮುಂಡರಗಿ ತಹಶೀಲ್ದಾರ್ ಕಾರ್ಯಾಲಯದ ಮುಂದೆ ಬೆಳಿಗ್ಗೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜನ ಕಲ್ಯಾಣ ಯಾತ್ರೆ ಚಳುವಳಿ ಮುಂಡರಗಿ ಯಿಂದ ಪ್ರಾರಂಭಿಸಿ ಗದಗ ವಾರಣಾಸಿ ಗಯಾ ಅಯೋಧ್ಯೆವರೆಗೂ ಯಾತ್ರೆ ಮಾಡಿ ಮರಳಿ ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಬಂದು ಜನಕಲ್ಯಾಣ ಯಾತ್ರೆಯ ವರದಿಯನ್ನು ಚಳುವಳಿಯ ಮುಖಾಂತರ ಸಲ್ಲಿಸಲಾಗುವುದು ಮತ್ತು ಸಾರ್ವತ್ರಿಕ ಲೋಕಸಭಾ ಚುನಾವಣೆ ಬಹಿಷ್ಕಾರಿಸಿ ಸರ್ಕಾರಗಳ ಜನ ವಿರೋಧಿ ನೀತಿಯನ್ನು ಈ ಸಂದರ್ಭದಲ್ಲಿ ಉಗ್ರವಾಗಿ ಖಂಡಿಸಿದರು. ಮಂಜುನಾಥ ಹುಬ್ಬಳ್ಳಿ, ಸುಭಾಷ ಕುಂಬಾರ, ರಮೇಶ ರಾಮೇನಳ್ಳಿ, ಬಸವರಾಜ ಅಗ್ಗದ, ಬಸಪ್ಪ ತಿಮ್ಮಪ್ಪ ವಡ್ಡರ ಮುಂತಾದವರು ಉಪಸ್ಥಿತರಿದ್ದರು.