ಅವಹೇಳನಕ್ಕೆ ಮೆಕಾನಿಕ್‌ಗಳ ಖಂಡನೆ

01Kush01
ಖಾಸಗಿ ಚಾನೆಲ್‌ನಲ್ಲಿ ಮೆಕಾನಿಕ್‌ಗಳ ಬಗ್ಗೆ ಅವಹೇಳನಕಾರಿಯಾಗಿ ಪ್ರಸಾರ ಮಾಡಿರುವುದನ್ನು ವಿರೋಧಿಸಿ ಕುಶಾಲನಗರದ ಬೈಕ್ ಮೆಕಾನಿಕ್‌ಗಳು ಪ್ರತಿಭಟನೆ ನಡೆಸಿದರು. ದರ್ಶನ್, ವೆಂಕಟೇಶ್, ಭರತ್, ರಾಕೇಶ್, ಇರ್ಪಾನ್, ನಿಶಾಂತ್, ಸಂತೋಷ್ ಇತರರು ಇದ್ದರು.
Published on

ಕುಶಾಲನಗರ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಕಾರ್ಯಕ್ರಮವೊಂದರಲ್ಲಿ ಮೆಕಾನಿಕ್‌ಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ದೃಶ್ಯ ಪ್ರಸಾರ ಮಾಡಿ ಅವಮಾನಿಸಿದ್ದಾರೆ ಎಂದು ಮಂಗಳವಾರ ಕುಶಾಲನಗರ ಬೈಕ್ ಮೆಕಾನಿಕ್ ಸಂಘದಿಂದ ಪ್ರತಿಭಟನೆ ನಡೆಸಿ, ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದ ಜಡ್ಜ್‌ಗಳು ಹಾಗೂ ಪಾತ್ರ ನಿರ್ವಹಿಸಿದ ವ್ಯಕ್ತಿಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಭರತ್ ನೇತೃತ್ವದಲ್ಲಿ ಪದಾಧಿಕಾರಿಗಳು ಒತ್ತಾಯಿಸಿದರು.

ಭರತ್ ಮಾತನಾಡಿ, ಮೆಕಾನಿಕ್‌ಗಳಿಗೂ ಗೌರವವಿದೆ. ಆ ಗೌರವಕ್ಕೆ ಧಕ್ಕೆಯಾದರೆ ಸಹಿಸಲು ಸಾಧ್ಯವಿಲ್ಲ. ಇಂತಹ ಕೀಳು ಮಟ್ಟದ ನಟನೆಯಿಂದ ಲಕ್ಷಾಂತರ ಮೆಕಾನಿಕ್‌ಗಳನ್ನು ಅವಮಾನಿಸಿದ್ದಾರೆ. ತಕ್ಷಣ ಖಾಸಗಿ ವಾಹಿನಿ, ಆ ನಟನೆ ಮಾಡಿದವರು, ಜಡ್ಜ್‌ಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ಸಂಘದ ಉಪಾಧ್ಯಕ್ಷ ಜಯಚಂದ್ರನ್, ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ದರ್ಶನ್, ರಾಕೇಶ್, ಇರ್ಪಾನ್ ನಿಶಾಂತ್ ಸಂತೋಷ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net