

ಕೊಪ್ಪಳ: ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು ತಡೆಯಬೇಕೆಂದು ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ಘಟಕ ಪದಾಧಿಕಾರಿಗಳು ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಗಿವೆ. ಆದರೂ ಮಹಿಳಾ ದೌರ್ಜನ್ಯ ನಿಂತಿಲ್ಲ. ಅತ್ಯಾಚಾರ, ಕೊಲೆ, ಕಿರುಕುಳ ಪ್ರಕರಣಗಳು ನಡೆಯುತ್ತಲೇ ಇವೆ. ಮಹಿಳೆಯನ್ನು ನಿರ್ಜೀವ ವಸ್ತುವಿನಂತೆ ಸಮಾಜ ನೋಡುತ್ತಿದೆ. ಕಲ್ಕತ್ತಾದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ, ಉತ್ತರಾಖಂಡದಲ್ಲಿ ನರ್ಸ್, ಬಿಹಾರದಲ್ಲಿ 9ನೇ ತರಗತಿ ವಿದ್ಯಾರ್ಥಿನಿ, ಉತ್ತರ ಪ್ರದೇಶದಲ್ಲಿ 3 ವರ್ಷದ ಮಗು, ಬೆಂಗಳೂರು, ಮಂಡ್ಯ ಸೇರಿ ಹೀಗೆ ಎಲ್ಲೆಡೆ ಅತ್ಯಾಚಾರಗಳು ನಡೆಯುತ್ತಿವೆ. ಶಾಲಾ, ಕಾಲೇಜು, ಆರೋಗ್ಯ ಕೇಂದ್ರ, ಕೆಲಸ ನಿರ್ವಹಿಸುವ ಸ್ಥಳ, ವಾಹನಗಳಲ್ಲಿ ಹೀಗೆ ಯಾವುದೇ ಸ್ಥಳದಲ್ಲಿ ಇವತ್ತು ಮಹಿಳೆ ಸುರಕ್ಷಿತವಾಗಿಲ್ಲ ಎಂದು ಆರೋಪಿಸಿದರು.
ರಾಷ್ಟ್ರಪತಿಯೂ ಒಬ್ಬ ಹೆಣ್ಣು. ಅವರು ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಮಧ್ಯಸ್ಥಿಕೆವಹಿಸಬೇಕು. ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕು. ಸೂಕ್ತ ಕಾನೂನು ಕ್ರಮಕ್ಕೆ ಸರ್ಕಾರಕ್ಕೆ ಸೂಚಿಸಬೇಕು. ದೌರ್ಜನ್ಯ ಎಸಗುವವರಿಗೆ ಕಠಿಣ ಶಿೆ ವಿಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಡಿಸಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಬಿಯಾ ಪಟೇಲ್, ರಿಜ್ವಾನ ಬೇಗಂ, ಫಿರಾಸತ್ ಾತಿಮಾ, ಮಹೇಕ್ ಮಾರಿಯಾ, ಅನೀಸ್ ಾತಿಮಾ ಇತರರಿದ್ದರು.