ನಿವೇಶನ, ಮನೆ ನೀಡಿ

protest in koppal house scheme memorandum
ನಿವೇಶನ ಮಂಜೂರಾತಿಗೆ ಆಗ್ರಹಿಸಿ ನಿವೇಶನ ರಹಿತರು ಸೋಮವಾರ ಕೊಪ್ಪಳದಲ್ಲಿ ಸೋಮವಾರ ಗ್ರೇಡ್​-2 ತಹಸೀಲ್ದಾರ್​ ಗವಿಸಿದ್ದಪ್ಪ ಮಣ್ಣೂರುಗೆ ಮನವಿ ಸಲ್ಲಿಸಿದರು. ಸಮಿತಿಯ ಎಸ್​.ಎ. ಗಫಾರ್​, ನೂರಸಾಬ ಹೊಸಮನಿ, ತುಕಾರಾಮ್​ ಪಾತ್ರೋಟಿ, ಡಾ.ಕೆ.ಎಸ್​.ಜನಾರ್ದನ, ಜಾಫರ್​ ಕುರಿ, ಶೋಭಾ ವಡ್ಡರ, ರೇಣುಕಮ್ಮ. ರೇಷ್ಮಾ ಭಾವಿಮನಿ, ಸುಮಂಗಲಾ, ಚೈತ್ರಾ, ಗೀತಾ ಇಂಗಳಗಿ ಇತರರಿದ್ದರು.
Published on

ಕೊಪ್ಪಳ: ನಿವೇಶನ ಹಾಗೂ ಮನೆ ಮಂಜೂರು ಮಾಡುವಂತೆ ಒತ್ತಾಯಿಸಿ ನಿವೇಶನ ಮತ್ತು ವಸಹಿ ರಹಿತರ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ನಗರದ ತಹಸೀಲ್ದಾರ್​ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಿವೇಶನ ಹಾಗೂ ವಸತಿ ರಹಿತರು ಅರ್ಜಿ ತೆಗದುಕೊಳ್ಳುತ್ತಿಲ್ಲ. ನಿಗಮದ ವೆಬ್​ಸೈಟ್​ ಲಾಕ್​ ಆಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ 73, 967 ಕುಟುಂಬಗಳು ವಸತಿ ರಹಿತವಾಗಿವೆ ಎಂದು ನಿಗಮದ ಸಮೀೆಯಲ್ಲಿಯೇ ಬಯಲಾಗಿದೆ. ನಮ್ಮ ಸಂದಿಂದಲೂ ಗ್ರಾಮವಾರು ಸಮೀೆ ನಡೆಸಿ ವರದಿ ಸಂಗ್ರಹಿಸಿದ್ದೇವೆ. ಇನ್ನು ಸಾವಿರಾರು ಅರ್ಹ ಕುಟುಂಬಗಳು ನಿವೇಶನ, ವಸತಿಗಾಗಿ ಅರ್ಜಿ ಸಲ್ಲಿಸಿಲ್ಲ. ನಿಗಮದ ಸಮೀಾ ಪಟ್ಟಿಯಲ್ಲಿ ಅವರ ಹೆಸರುಗಳಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪಟ್ಟಿಯಲ್ಲಿ ಸೇರಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಅರ್ಹರಿಗೆ ನಿವೇಶನ, ವಸತಿ ಕಲ್ಪಿಸಬೇಕು. ಅರ್ಜಿ ಸ್ವೀಕರಿಸಬೇಕು. ಅರ್ಹರನ್ನು ನಿಗಮದ ಪಟ್ಟಿಯಲ್ಲಿ ಸೇರಿಸಿ. ಸರ್ಕಾರಿ ಭೂಮಿ ಗುರುತಿಸಿ ನಿವೇಶನಕ್ಕೆ ಕಾಯ್ದರಿಸಬೇಕು. ಭೂಮಿ ಇಲ್ಲದಿದ್ದಲ್ಲಿ ಖಾಸಗಿ ಜಮೀನು ಸ್ವಾಧಿನಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಗ್ರೇಡ್​-2 ತಹಸೀಲ್ದಾರ್​ ಗವಿಸಿದ್ದಪ್ಪ ಮಣ್ಣೂರುಗೆ ಮನವಿ ಸಲ್ಲಿಸಲಾಯಿತು.

ಸಮಿತಿಯ ಎಸ್​.ಎ. ಗಫಾರ್​, ನೂರಸಾಬ ಹೊಸಮನಿ, ತುಕಾರಾಮ್​ ಪಾತ್ರೋಟಿ, ಡಾ.ಕೆ.ಎಸ್​.ಜನಾರ್ದನ, ಜಾಫರ್​ ಕುರಿ, ಶೋಭಾ ವಡ್ಡರ, ರೇಣುಕಮ್ಮ. ರೇಷ್ಮಾ ಭಾವಿಮನಿ, ಸುಮಂಗಲಾ, ಚೈತ್ರಾ, ಗೀತಾ ಇಂಗಳಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net