ನಾಳೆ ಪ್ರತಿಭಟನೆ

17-kglphoto-1,lokesh
Published on

ಕೊಳ್ಳೇಗಾಲ: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಖಂಡಿಸಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಘಟಕ ವತಿಯಿಂದ ಪಟ್ಟಣದಲ್ಲಿ ಜೂ.19 ರಂದು ಪ್ರತಿಭಟನಾ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಲೋಕೇಶ್ ಹೇಳಿದರು.

ಚಿತ್ರದುರ್ಗದ ಲಿಂಗಾಯತ ಸಮಾಜದ ರೇಣುಕಸ್ವಾಮಿ ನಟ ದರ್ಶನ್ ಅಭಿಮಾನಿಯಾಗಿದ್ದರು. ಆದರೂ ರೇಣುಕಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣದ ಆರೋಪಿಗಳಾಗಿರುವ ದರ್ಶನ್ ಸೇರಿದಂತೆ ಆತನನ ಸಹಚರರಿಗೆ ಕಠಿಣ ಶಿಕ್ಷೆಯಾಗಬೇಕು. ಸರ್ಕಾರದ ವತಿಯಿಂದ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕೆಂದು ಎಂದು ಒತ್ತಾಯಿಸಿ ಜೂ.19 ರಂದು ಪಟ್ಟಣದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಸ್ ನಿಲ್ದಾಣ ಸಮೀಪದ ಗಣೇಶನ ದೇವಾಲಯದ ಮುಂಭಾಗ ಬೆಳಗ್ಗೆ 10 ಗಂಟೆಗೆ ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಸಮಾವೇಶಗೊಂಡು, ನಂತರ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿ ತಾಲೂಕು ಕಚೇರಿ ತಲುಪಿ ಮನವಿ ಸಲ್ಲಿಸಲಾಗುವುದು. ರೇಣುಕಸ್ವಾಮಿ ಹತ್ಯೆ ಅಮಾನವೀಯವಾಗಿದ್ದು, ತಪ್ಪಿಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕಿದೆ. ಆದ್ದರಿಂದ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಜಿನಕನಹಳ್ಳಿ, ಮಹೇಶ್ ಉಗನೀಯ, ಶಿವಸ್ವಾಮಿ ಕಾಮಗೆರೆ, ಪಾಳ್ಯ ರಘು, ಸುಂದರಪ್ಪ, ಟಗರಪುರ ಮಹದೇವ ಸ್ವಾಮಿ, ಆಲಹಳ್ಳಿ ಪುಟ್ಟಪ್ಪ, ಕುಂತೂರು ನಂಜುಂಡಸ್ವಾಮಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net