ರಸ್ತೆ ವಿಸ್ತರಣೆಗೆ ಆಗ್ರಹಿಸಿ ಕಾಗಿನೆಲೆಯಲ್ಲಿ ಪ್ರತಿಭಟನೆ

14byd4
Published on

ಬ್ಯಾಡಗಿ: ಕನಕದಾಸ ವೃತ್ತದಿಂದ ಚನ್ನಕೇಶ್ವರ ದೇವಸ್ಥಾನದವರೆಗೆ ಹಾವೇರಿ-ಹಂಸಭಾವಿ ರಸ್ತೆ ವಿಸ್ತರಣೆ ಹಾಗೂ ಟಿಪ್ಪುಸುಲ್ತಾನ ವೃತ್ತ ಅಭಿವೃದ್ಧಿಗೆ ಆಗ್ರಹಿಸಿ ಎಎಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾಗಿನೆಲೆ ಗ್ರಾಮದಲ್ಲಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಂ.ಎನ್.ನಾಯಕ ಮಾತನಾಡಿ, ವಿಶ್ವಚೇತನ ಕನಕದಾಸರ ಕರ್ಮಭೂಮಿಯಾಗಿರುವ ಕಾಗಿನೆಲೆ ಪ್ರವಾಸಿ ತಾಣವಾಗಿದೆ. ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಸುಸಜ್ಜಿತ ರಸ್ತೆ ಸೇರಿದಂತೆ ಮೂಲಸೌಲಭ್ಯಗಳ ಕೊರತೆಯಿದೆ. ಈ ಕುರಿತು ಹಲವು ಬಾರಿ ಪ್ರತಿಭಟನೆ ಕೂಡ ನಡೆಸಲಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಕಾಗಿನೆಲೆ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ವಿಶೇಷ ನಿಗಾವಹಿಸಿ ಅಭಿವೃದ್ಧಿಗೆ ಸಹಕರಿಸಬೇಕಿದೆ ಎಂದು ಒತ್ತಾಯಿಸಿದರು.

ಲೋಕೋಪಯೋಗಿ ಹಾಗೂ ಪಿಡಿಒಗಳಿಗೆ ಮನವಿ ಪತ್ರ ಸಲ್ಲಿಸಿ ಹಲವು ವರ್ಷ ಗತಿಸಿದರೂ ನ್ಯಾಯ ದೊರಕಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗಮನ ಸೆಳೆದ ಪ್ರತಿಭಟನೆ

ಲೋಕೋಪಯೋಗಿ ಇಲಾಖೆ ಹಾಗೂ ಪ್ರಾಧಿಕಾರದ ನಿರ್ಲಕ್ಷ್ಯ ಖಂಡಿಸಿ ಎಎಪಿ ಕಾರ್ಯಕರ್ತರು ರಸ್ತೆ ಗುಂಡಿಯಲ್ಲಿ ಸಸಿ ನೆಡುವುದು, ತಗ್ಗುಗಳಲ್ಲಿ ಗೋಲಿ ಆಡುವುದು, ನಿಂಬೆ ಹಣ್ಣು ಆಟವಾಡುವ ಮೂಲಕ ಗಮನ ಸೆಳೆದರು. ಒಂದು ತಾಸಿಗೂ ಹೆಚ್ಚು ಕಾಲ ತಮಟೆ ಬಾರಿಸಿ ಗಮನ ಸೆಳೆದರು.

ಉಪತಹಸೀಲ್ದಾರ್ ಸಿದ್ದಲಿಂಗಪ್ಪ ಮಲ್ಲಾಡದ ಅವರಿಗೆ ಮನವಿ ಸಲ್ಲಿಸಿದರು. ಎಎಪಿ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಮಾಲತೇಶ ಕಟ್ಟಿಮನಿ, ವಕೀಲ ಅಲ್ಫಾಜ್ ಮತ್ತಿಹಳ್ಳಿ, ಸಾಧಿಕ ಕಲ್ಲಾಪುರ, ಅಶೋಕ ವರ್ಧಿ, ಮೋಲಾಲಿ ಮುಲ್ಲಾ, ಎಸ್.ಎಸ್. ಇಂಗಳಗುಂದಿ, ಎ.ಎ.ದಡ್ಡಿಕೊಪ್ಪ ಇತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net