

ಹೊಳೆನರಸೀಪುರ: ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಪ್ರಗತಿಪರ ಚಳವಳಿಗಳ ಒಕ್ಕೂಟದ ವತಿಯಿಂದ ಮನುಸ್ಮತಿ ದಹನ ಮಾಡಲಾಯಿತು.
ದಂಡೋರ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಮನುಷ್ಯರ ಬದುಕಿಗೆ ಕಂಟಕವಾಗಿರುವ ಮನುಸ್ಮತಿಯನ್ನು ಸಾರ್ವಜನಿಕವಾಗಿ ಸುಟ್ಟು ಇಂದಿಗೆ 98 ವರ್ಷಗಳಾದ ಸ್ಮರಣಾರ್ಥ ಹಾಸನ ಜಿಲ್ಲಾ ದಲಿತ ಪ್ರಗತಿಪರ ಚಳುವಳಿಗಳ ಒಕ್ಕೂಟದಿಂದ ತಾಲೂಕಿನಲ್ಲಿಯೂ ಸಾಂಕೇತಿಕವಾಗಿ ಮನುಸ್ಮತಿ ದಹಿಸಲಾಗುತ್ತಿದೆ ಎಂದು ತಿಳಿಸಿದರು.
ಮಹಾರಾಷ್ಟ್ರದ ಕಾಬೋಲ್ ಜಿಲ್ಲೆಯಲ್ಲಿ ಮನುಸ್ಮತಿಯನ್ನು ದಹಿಸುವ ನಿರ್ಣಯ ಕೈಗೊಂಡು, ಮನುಸ್ಮತಿಯಿಂದ ಭಾರತದ ಎಲ್ಲ ವರ್ಗ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಹಕ್ಕು ಸ್ವಾತಂತ್ರ್ಯ ನೀಡದ ಮನುಸ್ಮತಿಯನ್ನು 1928ರ ಡಿ.25ರಂದು ಸುಟ್ಟು ಹಾಕಿ ಚಳವಳಿ ನಡೆಸಲಾಗಿತ್ತು ಎಂದರು.
ದಂಡೋರ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಎಂ.ನಾಗರಾಜು, ಪದಾಧಿಕಾರಿಗಳಾದ ಕೆ.ಎನ್.ಸತೀಶ, ರಾಮದಾಸು, ಕರಿಯಪ್ಪ, ಸುನೀಲ್‌ಕುಮಾರ್, ಸಿದ್ದು, ಶಿವಮೂರ್ತಿ, ದಲಿತ ಸಂಘರ್ಷ ಸಮಿತಿಯ ಆನಂದ, ರವಿ, ಮಧು, ಅತ್ಮಿ ಮಹದೇವ್, ಅಂಬೇಡ್ಕರ್ ಆಟೋ ಚಾಲಕರು ಮತ್ತು ಮಾಲಿಕರ ಸಂಘದ ದಿನೇಶ ಸುರೇಶ ಕುಮಾರ್ ಇನ್ನಿತರು ಇದ್ದರು.