ಗಜೇಂದ್ರಗಡದಲ್ಲಿ ಪ್ರತಿಭಟನೆ 27ರಂದು

Strike
Published on

ಗಜೇಂದ್ರಗಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಕುಗ್ಗಿಸಲು ಕೇಂದ್ರ ಸರ್ಕಾರ ರಾಜ್ಯಪಾಲರ ಹುದ್ದೆ ದುರ್ಬಳಕೆ ಮಾಡಿಕೊಂಡು ಮೂಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದೆ. ಕೇಂದ್ರದ ಸರ್ಕಾರದ ಕುತಂತ್ರ ರಾಜಕಾರಣ ಖಂಡಿಸಿ ಆ.27ರಂದು ತಾಲೂಕು ಅಹಿಂದ ವರ್ಗಗಳ ಒಕ್ಕೂಟ ವತಿಯಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಒಕ್ಕೂಟ ಸಮಿತಿ ಸದಸ್ಯ ಎಚ್.ಎಸ್.ಸೋಂಪುರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದು ಬೆಳಗ್ಗೆ 9.30ಕ್ಕೆ ಪಟ್ಟಣದ ಎಪಿಎಂಸಿ ಆವರಣದಿಂದ ಜೋಡು ರಸ್ತೆ, ದುರ್ಗಾ ವೃತ್ತದ ಮೂಲಕ ಕಾಲಕಾಲೇಶ್ವರ ವೃತ್ತ ತಲುಪಿ ಬೃಹತ್ ಸಭೆಯಾಗಿ ಮಾರ್ಪಾಡಾಗಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇರವಾಗಿ ಎದುರಿಸಲು ವಿಫಲವಾಗಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯಪಾಲರ ಹುದ್ದೆ ದುರ್ಬಳಕೆ ಮಾಡಿಕೊಂಡಿವೆ ಎಂದು ಆರೋಪಿಸಿದರು.

ಪುರಸಭೆ ಸದಸ್ಯ ರಾಜು ಸಾಂಗ್ಲೀಕರ, ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ, ಬಸವರಾಜ ಚನ್ನಿ, ರವಿ ಗಡೇದವರ ಮಾತನಾಡಿದರು. ರಾಮಚಂದ್ರ ಹುದ್ದಾರ, ಉಮೇಶ ರಾಠೋಡ, ವೆಂಕಟೇಶ ಮುದಗಲ್, ಅಶೋಕಕುಮಾರ ಬಾಗಮಾರ, ಅಂದಪ್ಪ ಬಿಚ್ಚುರ, ಅಂದಪ್ಪ ರಾಠೋಡ, ಅರ್ಜುನ ರಾಠೋಡ, ಸುಭ್ರಮಣಿ ರೆಡ್ಡಿ, ತಾರಾಸಿಂಗ್ ರಾಠೋಡ, ಮಂಜುಳಾ ರೇವಡಿ, ಸುಮಂಗಲಾ ಇಟಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net