ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ

bmr (1)
Published on

ಬ್ರಹ್ಮಾವರ: ಬ್ರಹ್ಮಾವರ ತಹಸೀಲ್ದಾರ್ ಕಚೇರಿ ಬ್ರೋಕರ್‌ಗಳ ತಾಣವಾಗಿದ್ದು ಸರ್ಕಾರಿ ಭೂಮಿಗಳನ್ನು ಭೂ ವಾಫಿಯಾಗಳಿಗೆ ಕಬಳಿಸಲು ಸಹಕರಿಸುತ್ತಿದ್ದಾರೆ. ಎಸ್‌ಸಿ, ಎಸ್‌ಟಿ ಜನಾಂಗದ 94ಸಿ ಮತ್ತು 53 ಅರ್ಜಿಗಳನ್ನು ವಿಎ ಮತ್ತು ಆರ್‌ಐ ವರದಿ ನೀಡಿದ ಕಡತವನ್ನು ತಮ್ಮ ಬಳಿ ಇರಿಸಿಕೊಂಡು ವಂಚಿಸುತ್ತಿದ್ದಾರೆಂದು ಆರೋಪಿಸಿ ವಿರೋಧಿಸಿ ಸೋಮವಾರ ಸಮತಾ ಸೈನಿಕದಳ ಉಡುಪಿ ಜಿಲ್ಲಾ ಅಧ್ಯಕ್ಷ ವಿಶ್ವನಾಥ್ ಪೇತ್ರಿಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ತಾಲೂಕು ಕಚೇರಿಯಿಂದ ನೂರಾರು ಮಂದಿ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 66 ಮೂಲಕ ತಾಲೂಕು ಸೌಧಕ್ಕೆ ಸಾಗಿ ಬಂದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಪರಿಶೀಲನೆ ವಾಡುವುದಾಗಿ ಹೇಳಿದರು.

ಪ್ರತಿಭಟನೆ ಕುರಿತು ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ಪ್ರತಿಕ್ರಿಯೆ ನೀಡಿ ಇದೊಂದು ದುರುದ್ದೇಶದ ಪ್ರತಿಭಟನೆ ಎಂದರು.

ಬ್ರಹ್ಮಾವರ, ಕೋಟ, ಮತ್ತು ಮಲ್ಪೆ ಪೊಲೀಸ್ ಅಧಿಕಾರಿಗಳಾದ ರಾವೇಂದ್ರ ಸಿ, ರಾಮಚಂದ್ರ ನಾಯಕ್, ಸುದರ್ಶನ ದೊಡ್ಮನಿ, ಮಹಾಂತೇಶ್, ಜಯಕುವಾರ್, ಶಾಂತರಾಜ್ ವಿಠಲ್ ಬಂದೋಬಸ್ತ್ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net