ಕಾಂಗ್ರೆಸ್‌ನ ಎಟಿಎಂ ಆದ ರಾಜ್ಯ : ಅರುಣ್ ಜಿ.ಶೇಟ್ ಹೇಳಿಕೆ

New Project (53)
Published on

ಕಿನ್ನಿಗೋಳಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟವಾಗಿದೆ ಎಂಬ ಮಾತನ್ನು ವಿರೋಧ ಪಕ್ಷ ಹೇಳಬೇಕಾಗಿಲ್ಲ ಕಾಂಗ್ರೆಸ್ ಶಾಸಕರೇ ಸಾಕ್ಷಿ ಸಮೇತ ತೆರೆದಿಡುತ್ತಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ.ಶೇಟ್ ಹೇಳಿದರು.

ಜಿಜೆಪಿ ಮೂಲ್ಕಿ-ಮೂಡುಬಿದಿರೆ ಮಂಡಲ ವತಿಯಿಂದ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಕಿನ್ನಿಗೋಳಿ ಪಪಂ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಎಟಿಎಂ ಆಗಿ ಪರಿವರ್ತಿಸಿದ್ದು, ಖುದ್ದು ಸಿದ್ದರಾಮಯ್ಯನವರೇ ಪತ್ನಿಯ ಹೆಸರಲ್ಲಿ ಸರ್ಕಾರಿ ಸೈಟ್ ಗಿಟ್ಟಿಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವುದು ಜನತೆಗೆ ಗೊತ್ತಿದೆ. ಮುಡಾ ಹಗರಣ, ವಸತಿ ಹಗರಣ ಹೀಗೆ ನಾನಾ ಹಗರಣಗಳಲ್ಲಿ ತೊಡಗಿಸಿಕೊಂಡಿದ್ದು, ಅಭಿವೃದ್ಧಿ ಮಾತ್ರ ಶೂನ್ಯ. ಅವರು ಕೊಟ್ಟ ಗ್ಯಾರಂಟಿಗಳನ್ನು ಅವರಿಗೇ ಪೂರೈಸಲು ಅಸಾಧ್ಯವಾಗಿದೆ ಎಂದರು.

ಬಿಜೆಪಿ ಮುಖಂಡರಾದ ಈಶ್ವರ್ ಕಟೀಲ್, ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಸೋಂದ ಬಾಸ್ಕರ ಭಟ್, ಅಭಿಲಾಷ್ ಶೆಟ್ಟಿ ಕಟೀಲು, ದಿವಾಕರ ಕರ್ಕೇರ, ಪ್ರವೀಣ್ ಕಟೀಲು, ಅರುಣ್ ಮಲ್ಲಿಗೆಯಂಗಡಿ, ಕೇಶವ ಕರ್ಕೇರ, ಲೋಕಯ್ಯ ಸಾಲಿಯಾನ್, ಹೇಮಲತಾ, ಶೈಲೇಶ್ ಅಂಚನ್, ಉಮಾನಾಥ್, ಚರಣ್ ಕಟೀಲು, ವರುಣ್ ಶೇಡಿಗಾರ್, ಅಶೋಕ್ ಕೆಮ್ಮಡೆ, ಸುಧೀರ್ ಪಟ್ಟೆ, ಬೇಬಿ ಕೆಮ್ಮಡೆ, ಬಾಸ್ಕರ ಪೂಜಾರಿ, ಪ್ರೇಮ್ ರಾಜ್ ಶೆಟ್ಟಿ ಬರ್ಕೆ, ತಿಲಕ್ ರಾಜ್ ಶೆಟ್ಟಿ, ಕಪಿಲ ಗುತ್ತಕಾಡ್ ಜಯಾನಂದ ಮೂಲ್ಕಿ, ಚಂದ್ರಶೇಖರ ಬರ್ಕೆ, ದಯಾನಂದ ಶೆಟ್ಟಿ ಕೆ.ಜಿ.ಬೆಟ್ಟು, ಸಂಜಯ್ ಕೆಮ್ಮಡೆ, ದುರ್ಗಾಪ್ರಸಾದ್ ಶೆಟ್ಟಿ, ಆಶಾ ಸುವರ್ಣ ಮತ್ತಿತರರು ಇದ್ದರು. ಬಳ್ಕುಂಜೆ ಗ್ರಾಪಂ, ಐಕಳ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net