ಹಿರೇಬಾದವಾಡಗಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ

Protest in front of Hirebadavadagi Grampanchayat office
ಹುನಗುಂದ ತಾಲೂಕಿನ ಹಿರೇಬಾದವಾಡಗಿ ಗ್ರಾಮ ಪಂಚಾಯಿತಿ ಎದುರು ಕಾರ್ಮಿಕರು ಸೋಮವಾರ ಪ್ರತಿಭಟಿಸಿದರು. ಶಿವಪ್ಪ ಕುಂಬಾರ, ದೇವಮ್ಮ ವಾಲೀಕಾರ, ಮಹಾಂತೇಶ ವಾಲೀಕಾರ ಇದ್ದರು.
Published on

ಹುನಗುಂದ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಕೂಲಿ ಕಾರ್ಮಿಕರಿಗೆ ಕೆಲಸ, ಜಾಬ್ ಕಾರ್ಡ್‌ಗಳನ್ನು ನೀಡುವಂತೆ ಆಗ್ರಹಿಸಿ ತಾಲೂಕಿನ ಹಿರೇಬಾದವಾಡಗಿ ಗ್ರಾಮ ಪಂಚಾಯಿತಿ ಕಚೇರಿ ಎದುರು ನೂರಾರು ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯ ಮಹಾದೇವಿ ಹಡಪದ ಮಾತನಾಡಿ, ಕಳೆದ 9 ತಿಂಗಳಿನಿಂದ ಹಿರೇಬಾದವಾಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮೀಣ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿಯಲ್ಲಿ ಕೆಲಸ ನೀಡಿಲ್ಲ ಹಾಗೂ ಜಾಬ್ ಕಾರ್ಡ್, ಬಾಕಿ ಇರುವ ವೇತನ ನೀಡಬೇಕು. ಗ್ರಾಮ ಪಂಚಾಯಿತಿಯ ಮತ್ತು ತಾ.ಪಂ. ಅಧಿಕಾರಿಗಳಿಗೆ ಸಾಕಷ್ಟು ಸಲ ಅರ್ಜಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಕೂಡಲೇ ಅಧಿಕಾರಿಗಳು ಕೂಲಿ ಕೆಲಸ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಶಿವಪ್ಪ ಕುಂಬಾರ, ದೇವಮ್ಮ ವಾಲೀಕಾರ, ಮಹಾಂತೇಶ ವಾಲೀಕಾರ, ಪ್ರಭು ಹಳ್ಳೂರ, ರತ್ನಾ ಕುಂಬಾರ, ಕಲ್ಪನಾ ಚಲವಾದಿ, ಮಂಜುಳಾ ಬನ್ನಿಹಟ್ಟಿ, ಸೈರಾ ಬಾನು ಸೇರಿ ಕೂಲಿ ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net