ನಿಗದಿಪಡಿಸಿದ ಪೌಷ್ಟಿಕ ಆಹಾರವನ್ನೇ ನೀಡಲಿ

ಗಂಗಾವತಿ ತಾಪಂ ಕಚೇರಿ ಮುಂದೆ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್, ಪದಾಧಿಕಾರಿಗಳಾದ ಯು.ನಾಗರಾಜ್, ಶಿವಕುಮಾರ, ಆಶ್ವಿನಿ, ಸುಕನ್ಯಾ ಇತರರಿದ್ದರು.
ಗಂಗಾವತಿ ತಾಪಂ ಕಚೇರಿ ಮುಂದೆ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್, ಪದಾಧಿಕಾರಿಗಳಾದ ಯು.ನಾಗರಾಜ್, ಶಿವಕುಮಾರ, ಆಶ್ವಿನಿ, ಸುಕನ್ಯಾ ಇತರರಿದ್ದರು.
Published on

ಗಂಗಾವತಿ: ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ರಾಜ್ಯ ಸರ್ಕಾರ ನಿಗದಿಪಡಿಸಿದ ಪೌಷ್ಟಿಕ ಆಹಾರವನ್ನೇ ನೀಡುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ತಾಪಂ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಫೆಡರೇಷನ್ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಹಿಂದುಳಿದ ವರ್ಗ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಿದ್ದು, ರಾಜ್ಯ ಸರ್ಕಾರ ನಿಗದಿಪಡಿಸಿದ ಪೌಷ್ಟಿಕ ಆಹಾರ ನೀಡುತ್ತಿಲ್ಲ. ಜಿಲ್ಲೆಯವರೇ ಪ್ರತ್ಯೇಕ ಮೆನು ಮಾಡಿಕೊಂಡಿದ್ದು, ಬೆಲೆ ಏರಿಕೆ ನೆಪವೊಡ್ಡಿ ಪೌಷ್ಟಿಕ ಆಹಾರ ಕೈಬಿಟ್ಟಿದ್ದು ಸರಿಯಲ್ಲ. ಅದರಂತೆ ಗ್ರಂಥಾಲಯ, ಶುದ್ಧ ಕುಡಿವ ನೀರು ವ್ಯವಸ್ಥೆಯಾಗಬೇಕಿದ್ದು, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ಎಸ್‌ಎ್ಐ ನೇತೃತ್ವದಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ತಾಪಂ ಇಒ ರಾಮರೆಡ್ಡಿ ಪಾಟೀಲ್‌ರಿಗೆ ಸಲ್ಲಿಸಿದರು. ಕೇಂದ್ರಿಯ ಸಮಿತಿ ಸದಸ್ಯ ಅಮರೇಶ ಕಡಗದ್, ಪದಾಧಿಕಾರಿಗಳಾದ ಯು.ನಾಗರಾಜ, ಶಿವಕುಮಾರ, ಬಾಲಾಜಿ ಚಳ್ಳಾರಿ, ಆಶ್ವಿನಿ, ಸುಕನ್ಯಾ, ಭೀಮಾಂಬಿಕಾ, ಚಂದ್ರಶೇಖರ್, ರಾಘವೇಂದ್ರ, ಹನುಮಂತಿ, ಪ್ರಕಾಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net