

ಧಾರವಾಡ: ಹುಬ್ಬಳ್ಳಿ ತಾಲೂಕಿನ ಮಂಟೂರಿನ ಶ್ರೀ ಶಿವಲಿಂಗೇಶ್ವರ ಪ್ರೌಢಶಾಲೆಯ ಆಡಳಿತ ಮಂಡಳಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಶಿಕ್ಷಕರ ನೇಮಕಾತಿ ಮಾಡಿಕೊಂಡು ಸರ್ಕಾರದಿಂದ ಅನುದಾನ ಪಡೆಯುತ್ತಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬಂಡಿವಾಡ, ಮಂಟೂರು, ನಾಗರಳ್ಳಿ ಗ್ರಾಮಸ್ಥರು ಹಾಗೂ ಸಂಸ್ಥೆಯ ನೊಂದ ಶಿಕ್ಷಕರು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಶ್ರೀ ಅಡವಿ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಅಡಿ ನಡೆಯುವ ಶ್ರೀ ಶಿವಲಿಂಗೇಶ್ವರ ಪ್ರೌಢಶಾಲೆಯ ಆಡಳಿತ ಮಂಡಳಿಯು ಶಿಕ್ಷಕರ ನೇಮಕಾತಿ ಸಂದರ್ಭ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡದೆ ನಕಲಿ ದಾಖಲೆ ಸೃಷ್ಟಿಸಿತ್ತು. ಇದರಲ್ಲಿ ಶಿಕ್ಷಣ ಇಲಾಖೆಯ ಅಽಕಾರಿಗಳು ಶಾಮೀಲಾಗಿದ್ದಾರೆ. ತಪ್ಪಿತಸ್ಥ ಅಽಕಾರಿಗಳ ವಿರುದ್ಧ ಕ್ರಮ ಕÊಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಆಡಳಿತ ಮಂಡಳಿ ಹೊಸದಾಗಿ ನೇಮಕಾತಿ ಅಽಸೂಚನೆ ಹೊರಡಿಸಬೇಕು. ಸಂಸ್ಥೆಯಲ್ಲಿ ೨೦ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ನಾಲ್ವರು ಶಿಕ್ಷಕರು, ಬೋಧಕೇತರರನ್ನು ನೇಮಕ ಮಾಡಿಕೊಳ್ಳಬೇಕು. ವಜಾ ಮಾಡಿರುವ ಆಡಳಿತ ಮಂಡಳಿ ೧೧ ಸದಸ್ಯರನ್ನು ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಬಗ್ಗೆ ಸೂಕ್ತ ಕ್ರಮ ಜರುಗಿಸದಿದ್ದರೆ ಶಾಲೆಯ ಅನುದಾನ ರದ್ದತಿಗಾಗಿ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿರೂಪಾಕ್ಷಗೌಡ ಭರಮಗೌಡ್ರ, ಶಿಕ್ಷಕರಾದ ಎ-ï.ಎಸ್. ಅಮÁತಿಗೌಡರ, ಬಿ.ಆರ್. ಅರಳಿ, ಎಸ್.ಪಿ. ಹಿರೇಹಾಳ, ಎಂ.ಎಸ್. ಗಾಜಿ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.