5ರಂದು ರಾಷ್ಟ್ರಭಕ್ತರ ಬಳಗದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

ex dcm kse
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನವನ್ನು ಮುಸ್ಲಿಮರು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಪ್ಪಿಸುವಂತೆ ಒತ್ತಾಯಿಸಿ ಏ.5ರಂದು ಬೆಳಗ್ಗೆ 10.30ಕ್ಕೆ ರಾಷ್ಟ್ರಭಕ್ತರ ಬಳಗದಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಜಾಗದ ಖಾತೆ ಮಾಡಿಕೊಟ್ಟ ಅಧಿಕಾರಿ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ಆ ಜಾಗಕ್ಕೆ 2019ರವರೆಗೆ ಖಾತೆ ಇರಲಿಲ್ಲ. ಈಗ ಆಗಿರುವ ಖಾತೆಯೂ ಕಾನೂನು ಬಾಹಿರವಾಗಿದೆ. ಜಿಲ್ಲಾಧಿಕಾರಿಗಳು ಜಾಗದ ವಿವಾದವನ್ನು ಶಾಂತವಾಗಿ ಪರಿಶೀಲಿಸಬೇಕೆಂದು ಮನವಿ ಮಾಡಿದರು.

ಮುಸ್ಲಿಂ ನಾಯಕರು ತಮ್ಮದೇ ಆಸ್ತಿ ಎಂದು ಬೇಲಿ ಹಾಕಿದ್ದಾರೆ. ಈ ವಿಚಾರದಲ್ಲಿ ಎಸ್‌ಪಿ ಮಿಥುನ್‌ಕುಮಾರ್ ಸಂಪೂರ್ಣವಾಗಿ ಎಡವಿದ್ದಾರೆ. ರೈಲ್ವೆ ಹಳಿ ಬಳಸಿ ಬೇಲಿ ಹಾಕಿದವರನ್ನು ತಕ್ಷಣ ಪತ್ತೆ ಮಾಡಿ ಬಂಧಿಸಬೇಕು. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈಶ್ವರಪ್ಪ ಆಗ್ರಹಿಸಿದರು. ಜಾಗವು ಕಾನೂನುಬದ್ಧವಾಗಿ ಖಾತೆಯಾಗಿಲ್ಲ. ಅದು ಆಟದ ಮೈದಾನವಷ್ಟೆ. ಅದು ಸಾಮೂಹಿಕ ಪ್ರಾರ್ಥನೆ ಮಾಡುವ ಸ್ಥಳವಲ್ಲ ಎಂದರು.

ಮುಸ್ಲಿಮರು ಮೈದಾನ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಗೆಜೆಟ್ ನೋಟಿಫಿಕೇಶನ್‌ಗೆ ಅಪ್ಪ ಅಮ್ಮ ಇಲ್ಲ. ವಿಳಾಸವಿಲ್ಲ. ಈದ್ಗಾ ಸುನ್ನಿ ಎಂದಷ್ಟೆ ಇದೆ. ಕಟ್ಟಡ ನಿರ್ಮಾಣಕ್ಕೆ ಪಾಲಿಕೆಯಲ್ಲಿ ಕೆಲವರು ಓಡಾಡಿದ್ದಾರೆ. ಯೋಜನೆ ಪ್ರಕಾರ ಅಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ನಮ್ಮ ಬಳಿ ಇನ್ನೂ ಸಾಕಷ್ಟು ದಾಖಲೆಗಳಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net