ಡಿಸಿ ಕಚೇರಿ ಎದುರು ಪ್ರತಿಭಟನೆ

Strike
Published on

ಹಾವೇರಿ: ವಿವಿಧ ಕಂಪನಿಗಳ ವಂಚನೆ ವಿರುದ್ಧ ಟಗಿ ಪೀಡಿತ ಜಮಾಕರ್ತ ಪರಿವಾರ (ಟಿಪಿಜೆಪಿ)ಸಂಘಟನಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ಸೆ.7ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ವಿವಿಧ ಕಂಪನಿಗಳು ದೇಶಾದ್ಯಂತ ಲಕ್ಷಾಂತರ ಜನರಿಂದ ಬೇರೆ ಬೇರೆ ರೂಪದಲ್ಲಿ ಠೇವಣಿ ಪಡೆದು ವಂಚಿಸಿವೆ. ಜಿಲ್ಲೆಯ ಹಲವು ಗ್ರಾಹಕರೂ ಇವುಗಳಿಂದ ವಂಚನೆಗೆ ಒಳಗಾಗಿದ್ದಾರೆ. ವಂಚನೆಗೀಡಾದ ಗ್ರಾಹಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳಾದ ಸೋಮಶೇಖರರಡ್ಡಿ ಮೈದೂರ ಹಾಗೂ ಸೈಯದ್‌ಸಾಬ ಹುಲಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net