ಸೆಸ್ಕ್ ಕಚೇರಿ ಎದುರು ಪ್ರತಿಭಟನೆ

25spt5
ಸೋಮವಾರಪೇಟೆ ಸೆಸ್ಕ್ ಕಚೇರಿ ಎದುರು ವಿದ್ಯುತ್ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅನಿಲ್, ಪೊನ್ನಪ್ಪ, ಈರಪ್ಪ, ಜೀವನ್, ಚಿದಾನಂದ, ಸಂದೀಪ್ ಇದ್ದರು.
Published on

ಸೋಮವಾರಪೇಟೆ: ಬಿರುಗಾಳಿ ಸಹಿತ ಮಳೆಯಿಂದ ಕಿರಗಂದೂರು, ತಾಕೇರಿ, ತಲ್ತಾರೆಶೆಟ್ಟಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ಕೂಡಲೇ ವಿದ್ಯುತ್ ಮಾರ್ಗ ದುರಸ್ತಿಪಡಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಸೆಸ್ಕ್ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.


ಕಿರಗಂದೂರು ಗ್ರಾಮದಲ್ಲಿ 10 ಕಂಬಗಳು ನೆಲಕ್ಕುರುಳಿದ್ದು, ಕಳೆದ 20 ದಿನಗಳಿಂದ ವಿದ್ಯುತ್ ಇಲ್ಲ ಎಂದು ಕಿರಗಂದೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಚಿದಾನಂದ ಅಸಮಧಾನ ವ್ಯಕ್ತಪಡಿಸಿದರು.


ತಾಕೇರಿ ಗ್ರಾಮದ 40 ಮನೆಗಳಿಗೆ ಒಂದು ವಾರದಿಂದ ವಿದ್ಯುತ್ ಇಲ್ಲದೆ ಸಮಸ್ಯೆಯಾಗಿದೆ. ಕೂಡಲೇ ವಿದ್ಯುತ್ ಮಾರ್ಗ ಸರಿಪಡಿಸಬೇಕು ಎಂದು ತಾಕೇರಿ ಪೊನ್ನಪ್ಪ ಆಗ್ರಹಿಸಿದರು. ಗ್ರಾಮಸ್ಥರ ಮನವಿ ಆಲಿಸಿದ ಎಇಇ ರವಿಕುಮಾರ್ ಮಾತನಾಡಿ, ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಸೆಸ್ಕ್ ಸಿಬ್ಬಂದಿ ಶಕ್ತಿಮೀರಿ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ಮುರ‌್ನಾಲ್ಕು ದಿನಗಳಲ್ಲಿ ಮಾರ್ಗ ಸರಿಪಡಿಸಿ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಗ್ರಾಮಸ್ಥರಾದ ಶಿವಕುಮಾರ್, ಈರಪ್ಪ, ಜೀವನ್, ಸಂದೀಪ್, ಬಿ.ಪಿ.ಅನಿಲ್, ಸುರೇಶ್, ಬಿ.ಎಸ್.ನಾಗೇಶ್, ಸೋಮಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net