ಹನೆಹಳ್ಳಿ ಕೃಷ್ಣ ಕೊಲೆ ಪ್ರಕರಣ; 4 ತಿಂಗಳು ಕಳೆದರೂ ಅಪರಾಧಿಗಳ ಬಂಧಿಸದ ಪೊಲೀಸರು: ಬ್ರಹ್ಮಾವರದಲ್ಲಿ ಪ್ರತಿಭಟನೆ

web - bvr krishna1
ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು. ಜಿಲ್ಲಾ ಅಧ್ಯಕ್ಷ ವಿಶ್ವನಾಥ್ ಪೇತ್ರಿ, ಉಪಾಧ್ಯಕ್ಷ ಗಣೇಶ್ ಸಾಲ್ಯಾನ್, ಕಾರ್ಯಾಧ್ಯಕ್ಷ ಗಫೂರ್ ಕಾರ್ಕಳ, ಸಂಘಟನಾ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಕೋಶಾಧಿಕಾರಿ ಸತೀಶ್ ಜನ್ನಾಡಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Published on

ಬ್ರಹ್ಮಾವರ: ಬಾರಕೂರು ಹನೆಹಳ್ಳಿ ಮೂಡುತೋಟದ ಪರಿಶಿಷ್ಟ ಜನಾಂಗದ ಕೃಷ್ಣ ಎಂಬ ಯುವಕನನ್ನು ಗುಂಡಿಕ್ಕಿ ಕೊಲೆಗೈದು 4 ತಿಂಗಳು ಕಳೆದರೂ ಅಪರಾಧಿಗಳನ್ನು ಬಂಧಿಸಿಲ್ಲ. ಪ್ರಕರಣವನ್ನು ಸಿಒಡಿಗೆ ನೀಡಬೇಕು ಎಂದು ಉಡುಪಿ ಜಿಲ್ಲಾ ಸಮತಾ ಸೈನಿಕ ದಳದ ವತಿಯಿಂದ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.

ಸ್ಥಳಕ್ಕೆ ಆಗಮಿಸಿದ ಸಂಸದ ಕೋಟ

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು. ಉಸ್ತುವಾರಿ ಸಚಿವರು ನಮ್ಮ ಮನವಿ ಸ್ವಿಕರಿಸದ ಹೊರತು ಪ್ರತಿಭಟನೆ ಮುಂದುವರಿಯಲಿದೆ ಎಂದು ಪಟ್ಟುಹಿಡಿದಾಗ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಘಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಉನ್ನತ ಮಟ್ಟದಲ್ಲಿ ತನಿಖೆ ಮಾಡುವುದಾಗಿ ಹೇಳಿದರು.

ಸಮತಾ ಸೈನಿಕ ದಳದ ಉಡುಪಿ ಜಿಲ್ಲಾ ಅಧ್ಯಕ್ಷ ವಿಶ್ವನಾಥ್ ಪೇತ್ರಿ, ಉಪಾಧ್ಯಕ್ಷ ಗಣೇಶ್ ಸಾಲ್ಯಾನ್, ಕಾರ್ಯಾಧ್ಯಕ್ಷ ಗಫೂರ್ ಕಾರ್ಕಳ, ಸಂಘಟನಾ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಕೋಶಾಧಿಕಾರಿ ಸತೀಶ್ ಜನ್ನಾಡಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಭಟನಾ ಸ್ಥಳದಲ್ಲಿ ಸೂಕ್ತ ಬಂದೋಬಸ್ತ್

ಉಡುಪಿ ಆಡಿಶನಲ್ ಎಸ್‌ಪಿಟಿ ಸಿದ್ಧಲಿಂಗಯ್ಯ, ಡಿವೈಎಸ್‌ಪಿ ಪ್ರಭು ಡಿ.ಟಿ., ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ, ಬ್ರಹ್ಮಾವರ ಠಾಣಾಧಿಕಾರಿ ಮಧು, ಹಿರಿಯಡ್ಕ್ ಠಾಣಾಧಿಕಾರಿ ಮಂಜುನಾಥ್ ಪ್ರತಿಭಟನಾ ಸ್ಥಳದಲ್ಲಿ ಸೂಕ್ತ ಬಂದೋಬಸ್ತ್ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net