ಜು.21 ರಂದು ಬೆಂಗಳೂರಿನಲ್ಲಿ ಧರಣಿ

MOHAMAD NIJAMUDDIN
MOHAMAD NIJAMUDDIN
Published on

ರಾಯಚೂರು ರಾಜ್ಯ ಸರ್ಕಾರವು ಜಿಲ್ಲೆಯ ಯರಗೇರಾ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಒತ್ತಾಯಿಸಿ ಜು.21 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟ ಧರಣಿ ನಡೆಸಲು ತೀರ್ಮಾನ ಮಾಡಲಾಗಿದೆಂದು ಹೋರಾಟ ಸಮಿತಿ ಸಂಚಾಲಕ ಮಹ್ಮದ್ ನಿಜಾಮುದ್ದೀನ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯರಗೇರಾ ಹೋಬಳಿಯು ತಾಲೂಕು ಕೇಂದ್ರವಾಗಲು ಎಲ್ಲಾ ಅರ್ಹತೆ ಪಡೆದಿದೆ. ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವೂ ಸೇರಿದಂತೆ ನೂರಾರು ಎಕರೆ ಸರ್ಕಾರಿ ಜಮೀನು ಲಭ್ಯವಿದೆ. 19 ಗ್ರಾಮ ಪಂಚಾಯಿತಿಗಳು, 78 ಗ್ರಾಮಗಳನ್ನು ಒಳಗೊಂಡು ಹೆದ್ದಾರಿ ರಸ್ತೆಯಲ್ಲಿದ್ದು ನೂರಾರು ಗ್ರಾಮಸ್ಥರಿಗೆ ತಾಲೂಕ ಕೇಂದ್ರವಾದರೆ ಅನುಕೂಲವಾಗುತ್ತದೆ.

2020 ರಿಂದ ತಾಲೂಕ ಕೇಂದ್ರವನ್ನಾಗಿಸಲು ನಿರಂತರ ಹೋರಾಟ ನಡೆಸಿಕೊಂಡು ಬರಲಾಗಿದೆ. ಇತ್ತೀಚಿಗೆ ಯರಗೇರಾ ಗ್ರಾಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರದಿಂದ ಯಾವುದೇ ಸ್ಪಂದನೆ ಬಾರದೇ ಇರುವರಿಂದ ಪಕ್ಷಾತೀತವಾಗಿ ಬೆಂಗಳೂರಿನಲ್ಲಿ ಹೋರಾಟ

ನಡೆಸಲು ತೀರ್ಮಾನಿಸಲಾಗಿದೆ. ಗಿಲ್ಲೆಸೂಗೂರು, ಯರಗೇರಾ, ಕಲ್ಮಲಾ ಹೋಬಳಿ ವಿವಿಧ ಗ್ರಾಮಸ್ಥರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಮುಂದಿನ ಹಂತದಲ್ಲಿ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು ಹಾಗೂ ಸಂಸದರ ಮನೆ, ಕಚೇರಿಗಳ ಮುಂದೆ ಅನಿರ್ದಿಷ್ಟ ಧರಣಿ ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ ಹೂಗಾರ, ವಿದ್ಯಾನಂದರೆಡ್ಡಿ, ಮಹಿಭೂಬಪಟೇಲ್, ತಾಯಪ್ಪ ನಾಯಕ, ಮಹ್ಮದ ರಫಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net