ಯರಗೇರಾ ತಾಲೂಕು ಘೋಷಣೆಗಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ

raichur
raichur
Published on

ರಾಯಚೂರು ಯರಗೇರಾ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಒತ್ತಾಯಿಸಿ ಯರಗೇರಾ ತಾಲೂಕು ಹೋರಾಟ ಸಮಿತಿಯಿಂದ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಲಾಯಿತು.

ಧರಣಿ ಮುಂಚಿತವಾಗಿ ಯರಗೇರಾ ಗ್ರಾಮದಲ್ಲಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ , ಸುಮಾರು 40 ಕ್ರಷರ್‌ಗಳಲ್ಲಿ ಕನಿಷ್ಠ 400ಕ್ಕೂ ಅಧಿಕ ಜನರು ಬೆಂಗಳೂರಿಗೆ ತೆರಳಿದ್ದರು. ಯರಗೇರಾ ಹೋಬಳಿಯು ತಾಲೂಕು ಕೇಂದ್ರವಾಗಲು ಅಗತ್ಯವಿರ ಅಂಶಗಳನ್ನು ಹೊಂದಿದೆ. ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಇಲ್ಲಿ ಸ್ಥಾಪಿತವಾಗಿದ್ದು, 326 ಎಕರೆ ಸರ್ಕಾರಿ ಭೂಮಿ ಲಭ್ಯವಿದೆ.

ರಾಷ್ಟ್ರೀಯ ಹೆದ್ದಾರಿ 167ರ ಬಳಿಯಲ್ಲಿರುವ ಈ ಪ್ರದೇಶದಲ್ಲಿ ಯೋಜನೆಗಳಿಗೆ ಯಾವುದೇ ತಾಂತ್ರಿಕ ಅಡಚಣೆಗಳಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾಗಿದ್ದು, ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ನಡುವೆಯಿದ್ದರೂ ನೀರಾವರಿ ಸೌಲಭ್ಯದಿಂದ ವಂಚಿತವಾಗಿದೆ. ಒಟ್ಟು 19 ಗ್ರಾಮ ಪಂಚಾಯಿತಿಗಳ 78 ಗ್ರಾಮಗಳು ಈ ಹೋಬಳಿಗೆ ಸೇರಿವೆ. ಹೀಗಾಗಿ ತಾಲ್ಲೂಕು ಘೋಷಣೆಯಾಗುವುದು ನ್ಯಾಯಯುತ ಮತ್ತು ಅಗತ್ಯ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮಹ್ಮದ್ ನಿಜಾಮುದ್ದೀನ್, ಬುಡ್ಡನಗೌಡ ಪಾಟೀಲ್, ನಟಿ ಪೂಜಾ ರಮೇಶ, ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ್ ಹೂಗಾರ್, ವಿದ್ಯಾನಂದ್ ರೆಡ್ಡಿ, ತಾಯಪ್ಪ, ಮೊಮ್ಮದ್ ರಫಿ, ರಾಮರೆಡ್ಡಿ, ಬಸವರಾಜ ರೆಡ್ಡಿ, ಮಹದೇವ ನಾಯಕ್, ರಮೇಶ್, ವೆಂಕಟೇಶ್, ರವಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net