ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 28ರಂದು ಬೆಳಗಾವಿಯಲ್ಲಿ ಪ್ರತಿಭಟನೆ

PHOTO-1-06
Published on

ಚಿತ್ರದುರ್ಗ: ಕರ್ನಾಟಕ ಸಣ್ಣ ಖನಿಜ ರಿಯಾಯಿತಿ ನಿಯಮಗಳು-1994(ಕೆಎಂಎಂಸಿಆರ್)ರಲ್ಲಿರುವ ನೂನ್ಯತೆಗಳನ್ನು ಸರಿಪಡಿಸುವಂತೆ ಕೋರಿ ಕಳೆದ 4 ವರ್ಷಗಳಿಂದ ನಿರಂತರ ನಡೆಸುತ್ತಿರುವ ನಮ್ಮ ಹೋರಾಟವನ್ನು ಕಡೆಗಣಿಸುತ್ತಿರುವ ರಾಜ್ಯಸರ್ಕಾರದ ವಿರುದ್ಧ ಡಿ.28ರಂದು ಬೆಳ ಗಾವಿಯಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಜಿಲ್ಲಾ ಕ್ರಷರ್ ಮತ್ತು ಕ್ವಾರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಮಾಜೀ ದ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕಲ್ಲು ಗಣಿಗಾರಿಕೆಯನ್ನು ಸಕ್ರಮವಾಗಿ ನಡೆಸಲು ಅವಕಾಶ ಕೊಡಿ ಎಂದು ನಾವು ಕೇಳುತ್ತಿದ್ದೇವೆ. ಗುರುವಾರದಿಂದ ಕ್ರಷರ್ ಕ್ವಾರಿಗಳನ್ನು ಸ್ಥಗಿತಗೊಳಿಸಲಾಗಿದ್ದು,ರಾಜ್ಯದೆಲ್ಲ ಕ್ರಷರ್ ಹಾಗೂ ಕ್ವಾರಿ ಮಾಲೀಕರು,ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಕೆಎಂಎಂಸಿಆರ್‌ರಲ್ಲಿರುವ ನೂನ್ಯತೆಗಳನ್ನು ಸರಿಪಡಿಸುವುದು,ಗುತ್ತಿಗೆದಾರರು,ಮಾಲೀಕರಿಂದ ರಾಜಧನ ವಸೂಲಿ ಸ್ಥಗಿತಗೊಳಿಸುವು ದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು. ಜಿಲ್ಲೆಯಲ್ಲಿ 18 ಕ್ರಷರ್‌ಗಳಿದ್ದು,ಹತ್ತು ಬಸ್‌ಗಳಲ್ಲಿ ಬೆಳಗಾವಿಗೆ ತೆರಳಲಿದ್ದೇವೆ ಎಂದರು. ಜಿಲ್ಲಾ ಕ್ರಷರ್ ಮತ್ತು ಕ್ವಾರಿ ಮಾಲೀಕರ ಅಸೋಸಿಯೇಷನ್ ಕಾರ‌್ಯದರ್ಶಿ ಜಿ.ಬಿ.ಶೇಖರ್,ವೆಂಕಟೇಶ್,ಮಲ್ಲಿಕಾರ್ಜುನ್, ಅಶೋಕ್‌ರೆಡ್ಡಿ,ಜಿ.ಸಿ.ಸುರೇಶ್‌ಬಾಬು,ಅನಂದ್,ಅಭಿಷೇಕ್,ನಿರಂಜನ,ವೀರಭದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net