ಶಂಕರಾಚಾರ್ಯ ಪೀಠಕ್ಕೆ ಅವಮಾನ : ಸುನೀಲ್ ಪಿ.ಆರ್. ಖೇದ

New Project
Published on

ಬದಿಯಡ್ಕ: ನಾಡಿನ ಶಾಂತಿ ಹಾಳುಗೆಡಹುವ ಸಮಾಜದ್ರೋಹಿಗಳ ಗುಂಪನ್ನು ಹೆಡೆಮುರಿಕಟ್ಟುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ದೇಶದಾದ್ಯಂತ ಪೂಜಿಸಲ್ಪಡುವ ಕೇರಳದ ಏಕೈಕ ಶಂಕರಾಚಾರ್ಯ ಪೀಠದ ಯತಿಗಳಿಗೆ ಕಾಸರಗೋಡು ಜಿಲ್ಲೆಯಲ್ಲಿ ಆದ ಅನ್ಯಾಯವನ್ನು ಹಿಂದು ಸಮಾಜ ಎದುರಿಸುತ್ತದೆ ಎಂದು ಪರಿವಾರ ಸಂಘಟನೆಗಳ ಮುಖಂಡ ಸುನೀಲ್ ಪಿ.ಆರ್. ಹೇಳಿದರು.

ಎಡನೀರು ಶ್ರೀಗಳ ವಾಹನಕ್ಕೆ ಹಾನಿಗೈದವರನ್ನು ಬಂಧಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಬದಿಯಡ್ಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಮುಖಂಡರಾದ ಸಂಕಪ್ಪ ಭಂಡಾರಿ, ಸುಧಾಮ ಗೋಸಾಡ, ಹರಿಪ್ರಸಾದ ರೈ ಪುತ್ರಕ್ಕಳ, ಮಂಜುನಾಥ ಮಾನ್ಯ, ಸುನೀಲ್ ಕಿನ್ನಿಮಾಣಿ, ಪರಿವಾರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ರಮೇಶ್ ಕೃಷ್ಣ ಪದ್ಮಾರು ಸ್ವಾಗತಿಸಿದರು. ಗಣೇಶ್ ಮಾವಿನಕಟ್ಟೆ ವಂದಿಸಿದರು. ಬದಿಯಡ್ಕ ಮೇಲಿನ ಪೇಟೆಯಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸ್ಸು ತಂಗುದಾಣದಲ್ಲಿ ಸಮಾಪನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net