ಬಬಲೇಶ್ವರದಲ್ಲಿ ಇಂದು ಪ್ರತಿಭಟನೆ

Protest in Babaleshwar today
ಮಹಾದೇವ ಶ್ರೀಗಳು
Published on

ಬಬಲೇಶ್ವರ : ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ಸೋಮವಾರ ಪೊಲೀಸರು ಲಾಠಿ ಚಾರ್ಜ್​ ಮಾಡಿ, ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದು, ಇದು ತೀವ್ರ ಖಂಡನಾರ್ಹ ಎಂದು ಬಬಲೇಶ್ವರದ ಬ್ರಹ್ಮಮಠದ ಪೀಠಾಧಿಪತಿ ಹಾಗೂ ಪಂಚಮಸಾಲಿ ಆಲಗೂರು ಪೀಠದ ಮೂರನೇ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರು ಹೇಳಿದ್ದಾರೆ. ಸರ್ಕಾರದ ಹಿಟ್ಲರ್​ ಧೋರಣೆಯನ್ನು ಖಂಡಿಸಿ, ಡಿ. 12 ರಂದು ಬೆಳಗ್ಗೆ 10 ಗಂಟೆಗೆ ಬಬಲೇಶ್ವರ ನಗರದ ಶಾಂತವೀರ ವೃತ್ತದಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದಕ್ಕೆ ಜಿಲ್ಲೆಯ ಸಮಸ್ತ ಪಂಚಮಸಾಲಿ ಸಮಾಜದ ಬಾಂಧವರು ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net