ಒತ್ತುವರಿಯಾಗಿರುವ ರಸ್ತೆ ಬಿಡಿಸದಿದ್ದರೆ ಪ್ರತಿಭಟನೆ

 ಬೆಟ್ಟಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿರುವ ರಸ್ತೆಯನ್ನು ಬಿಡಿಸುವಂತೆ ರೈತರು ಆಗ್ರಹಿಸುತ್ತಿರುವುದು.
ಬೆಟ್ಟಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿರುವ ರಸ್ತೆಯನ್ನು ಬಿಡಿಸುವಂತೆ ರೈತರು ಆಗ್ರಹಿಸುತ್ತಿರುವುದು.
Published on

ಬನ್ನೂರು: ಜಮೀನಿಗೆ ತೆರಳಲು ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರತಿಭಟನೆ ಅನಿವಾರ್ಯ ಎಂದು ರಾಜ್ಯ ರೈತ ಸಂಘ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಎಚ್ಚರಿಸಿದರು.

ಸಮೀಪದ ಬೆಟ್ಟಹಳ್ಳಿ ಗ್ರಾಮದಲ್ಲಿ ಜಮೀನಿಗೆ ತೆರಳಲು ರಸ್ತೆ ಇದ್ದರೂ ಕಾಂತರಾಜು ಅವರು ರಸ್ತೆ ಬಿಡದೆ ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶನಿವಾರ ಬನ್ನೂರು ನಾರಾಯಣ್ ಭೇಟಿ ನೀಡಿ ಮಾತನಾಡಿದರು. ಒತ್ತುವರಿಯಿಂದಾಗಿ ಹಿಂಭಾಗದ ಜಮೀನಿನ ರೈತರಿಗೆ ತೊಂದರೆಯಾಗುತ್ತಿದೆ. ಸಮಸ್ಯೆ ಬಗೆಹರಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮವಾಗಿಲ್ಲ ಎಂದು ಕಿಡಿಕಾರಿದರು.

ಕೂಡಲೇ ರಸ್ತೆಯನ್ನು ಒತ್ತುವರಿದಾರರಿಂದ ಬಿಡಿಸಿಕೊಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸ್ಥಳೀಯರಾದ ಚಿನ್ನಸ್ವಾಮಿ, ರಾಮಚಂದ್ರ, ಪತ್ತೆಕೊಳ್ಳಯ್ಯನ ಜಯಮ್ಮ, ಮಮತಾ, ಉಮೇಶ್, ಲಿಂಗರಾಜು, ನರಸಿಂಹ, ಪ್ರಕಾಶ್, ಶಿವರಾಂ ಇದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net