ಘನತೆಗೆ ಕುಂದಾದರೆ ಪ್ರತಿಭಟಿಸಿ

ಅಖಿಲ ಭಾರತ ವೀರಶೈವ ಮಹಾಸಭಾದ ಮದ್ದೂರು ತಾಲೂಕು ಘಟಕದ ಕಚೇರಿಯನ್ನು ವೈದ್ಯನಾಥಪುರದ ಕದಂಬ ಜಂಗಮ ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಉಮಾಪತಿ, ತಾಳಶಾಸನ ಆನಂದ್, ಕೆಸ್ತೂರು ಸಿ.ಜಿ.ಗೌರಿಶಂಕರ್, ಎಂ.ವೀರಭದ್ರಸ್ವಾಮಿ, ಕೆ.ಶಿವಕುಮಾರ್ ಇದ್ದರು.
ಅಖಿಲ ಭಾರತ ವೀರಶೈವ ಮಹಾಸಭಾದ ಮದ್ದೂರು ತಾಲೂಕು ಘಟಕದ ಕಚೇರಿಯನ್ನು ವೈದ್ಯನಾಥಪುರದ ಕದಂಬ ಜಂಗಮ ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಉಮಾಪತಿ, ತಾಳಶಾಸನ ಆನಂದ್, ಕೆಸ್ತೂರು ಸಿ.ಜಿ.ಗೌರಿಶಂಕರ್, ಎಂ.ವೀರಭದ್ರಸ್ವಾಮಿ, ಕೆ.ಶಿವಕುಮಾರ್ ಇದ್ದರು.
Published on

ಮದ್ದೂರು: ವೀರಶೈವ ಸಮುದಾಯ ಮತ್ತು ಮುಖಂಡರ ಘನತೆಗೆ ಕುಂದು ಬಂದ ಸಂದರ್ಭದಲ್ಲಿ ಒಕ್ಕೊರಲಿನಿಂದ ಪ್ರತಿಭಟಿಸುವ ಮನೋಭಾವವನ್ನು ಸಮಾಜದವರು ಬೆಳೆಸಿಕೊಳ್ಳಬೇಕು ಎಂದು ವೈದ್ಯನಾಥಪುರದ ಕದಂಬ ಜಂಗಮ ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಕೋಟೆಬೀದಿಯ ಶ್ರೀ ನರಸಿಂಹಸ್ವಾಮಿ ದೇಗುಲದ ಆವರಣದಲ್ಲಿ ಭಾನುವಾರ ಮದ್ದೂರು ತಾಲೂಕು ವೀರಶೈವ ಮಹಾಸಭಾದ ತಾಲೂಕು ಘಟಕದ ನೂತನ ಕಚೇರಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ವೀರಶೈವ ಸಮಾಜ ಬೇರೆ ಜನಾಂಗಕ್ಕಿಂತಲ್ಲೂ ಬಲಿಷ್ಠವಾಗಿ ಬೆಳೆದಿದೆ. ರಾಜಕೀಯ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೆ. ಜನಾಂಗಕ್ಕೆ ಮಿಸಲಾತಿ ಹೋರಾಟ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಮೂಲಕ ತನ್ನ ಪಾಲಿನ ಹಕ್ಕನ್ನು ಪಡೆದುಕೊಳ್ಳಲು ಜನಾಂಗ ನಿರಂತರ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದೆ. ಮುಂದೆಯೂ ಹೋರಾಟದಿಂದ ಜನಾಂಗ ಹಿಂದೆ ಸರಿಯಬಾರದು ಎಂದು ಸ್ವಾಮೀಜಿ ಹೇಳಿದರು.

ವೀರಶೈವ ಸಂಘ ಕೇವಲ ತೋರ್ಪಡಿಕೆ ಸಂಘವಾಗಿ ಉಳಿಯದೆ ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು. ಸಮಾಜದಲ್ಲಿ ಶೋಷಿತರಾಗಿರುವ ಜನಾಂಗ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದರಿಗೆ ಸರ್ಕಾರದಿಂದ ದೊರಕಬೇಕಾದ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ವೀರಶೈವ ಮಹಾಸಭಾ ನಿರಂತರವಾಗಿ ಕಾರ್ಯೋನ್ಮುರಾಗಬೇಕು ಎಂದು ಹೇಳಿದರು.

ಕಚೇರಿ ಉದ್ಘಾಟಿಸಿದ ಉದ್ಯಮಿ ಮಡೇನಹಳ್ಳಿ ಉಮಾಪತಿ ಮಾತನಾಡಿ, ವೀರಶೈವ ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಾಯ ಹಸ್ತ ನೀಡಲು ಸಿದ್ಧನಿದ್ದೇನೆ. ಸಮಾಜದವರು ಒಡಕಿನ ಸ್ವಭಾವ ಬಿಟ್ಟು ಸಂಘಟಿತರಾಗಬೇಕು. ಸಮಾಜದ ಜನರಿಗೆ ಕಿಂಚಿತ್ತಾದರೂ ನೆರವು ನೀಡುವ ಸಂಕಲ್ಪ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ಮಹಾ ಸಮಾಜದ ಅಧ್ಯಕ್ಷ ತಾಳಶಾಸನ ಆನಂದ್ ಅವರನ್ನು ಸನ್ಮಾನಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾದ ಮದ್ದೂರು ತಾಲೂಕು ಘಟಕದ ಅಧ್ಯಕ್ಷರಾದ ಕೆಸ್ತೂರು ಗ್ರಾಮದ ಸಿ.ಜಿ.ಗೌರಿಶಂಕರ್, ನಿದೇಶಕರಾದ ಮದ್ದೂರಿನ ಪಿ.ರಾಜಶೇಖರ್, ಎಂ.ವೀರಭದ್ರಸ್ವಾಮಿ, ಎಚ್.ಬಿ.ಸ್ವಾಮಿ, ಕೆ.ಶಿವಕುಮಾರ್, ಬೂದಗುಪ್ಪೆ ಗ್ರಾಮದ ಬಿ.ಎಸ್.ಬಸವಲಿಂಗಶಾಸ್ತ್ರಿ, ಎಸ್.ಮರಿಲಿಂಗಪ್ಪ, ಬೆಸಗರಹಳ್ಳಿ ಬಿ.ಎಸ್.ನಾಗರಾಜು, ದೊಡ್ಡ ಅರಸಿನಕೆರೆ ಡಿ.ಎಂ.ರವಿಕುಮಾರ್, ಅಣ್ಣೂರು ಆರ್.ಸಿದ್ದಪ್ಪ, ಭಾರತೀನಗರ ಕೆ.ಎಸ್.ಸಿದ್ದೇಶ್ವರ್, ಕಾಡುಕೊತ್ತನಹಳ್ಳಿ ದಯಾನಂದ್, ಎಸ್.ಐ.ಹೊನ್ನಲಗೆರೆ ಎಚ್.ಆರ್.ರೇವಣ್ಣಸ್ವಾಮಿ, ಬಿದರಕೋಟೆ ಯೋಗೇಶ್ ಹಾಗೂ ಮಹಿಳಾ ನಿರ್ದೇಶಕರಾದ ಶಿವಪುರ ಶಿಲ್ಪಶ್ರೀ, ಭಾರತೀನಗರ ಜೆ.ಕವಿತಾ, ಮಡೇನಹಳ್ಳಿ ಎಂ.ಎಸ್.ನೇತ್ರಾವತಿ, ಕೆ.ಹೊನ್ನಲಗೆರೆ ಎಂ.ಎಸ್.ಮಂಜುಳಾ, ಭೀಮನಕೆರೆ ಶಶಿಕಲಾ, ಎಸ್.ಐ.ಹೊನ್ನಲಗೆರೆ ನಿಲಾಂಬಿಕ ಹಾಗೂ ತಗ್ಗಹಳ್ಳಿ ಶಿವಕುಮಾರಿ, ಶ್ರೀ ಜಗಜ್ಯೋತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ್, ಮಾಜಿ ಅಧ್ಯಕ್ಷ ಮಹದೇವಯ್ಯ, ಗ್ರಾಪಂ ಉಪಾಧ್ಯಕ್ಷ ಹುಲಿಕೆರೆ ನಟರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net