ದಿನಗೂಲಿ ನೌಕರರನ್ನು ಕಾಯಂಗೊಳಿಸದಿದ್ದರೆ ಪ್ರತಿಭಟನೆ

raised-fist-icon-hand-protest-strike-fight-vector-7513463
Published on

ಮೈಸೂರು: ದಿನಗೂಲಿ ನೌಕರರ ಕಾಯಂಗೆ ಸಂಬಂಧಿಸಿದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸಮಾಜ ಕಲ್ಯಾಣ ಇಲಾಖೆ ಉಲ್ಲಂಘಿಸಿದೆ. ಹೀಗಾಗಿ ಕೂಡಲೇ ತಪ್ಪನ್ನು ಸರಿಪಡಿಸಿಕೊಂಡು ವಂಚಿತ ನೌಕರರನ್ನು ಕಾಯಂಗೊಳಿಸಬೇಕು. ಇಲ್ಲದಿದ್ದರೆ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ್ ಬಣ) ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ದಸಂಸ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ ಎಚ್ಚರಿಸಿದರು.


ಸಮಾಜ ಕಲ್ಯಾಣ ಇಲಾಖೆಯಲ್ಲಿ ಸುಮಾರು 28 ವರ್ಷ ಕಾಲ ಸೇವೆ ಸಲ್ಲಿಸಿ ಶೀಘ್ರದಲ್ಲೇ ನಿವೃತ್ತರಾಗಲಿರುವ ವಿದ್ಯಾರ್ಥಿನಿಲಯ ಮೇಲ್ವಿಚಾರಕ ರೇವಣ್ಣ ಅವರನ್ನು ಸುಪ್ರೀಂಕೋರ್ಟ್ ಆದೇಶದಡಿ ಈಗಾಗಲೇ ಕಾಯಂಗೊಳಿಸಲಾಗಿದೆ. ಆದರೆ, ಕೆಲವರು ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಇತರ ದಿನಗೂಲಿ ನೌಕರರ ಕಾಯಂ ಆಗಿಲ್ಲ. ಹೀಗಾಗಿ ಸಂಬಂಧಪಟ್ಟವರನ್ನು ಕೂಡಲೇ ವರ್ಗಾಯಿಸಬೇಕು. ನ್ಯಾಯಾಲಯದ ತೀರ್ಪಿನಂತೆ ಇತರ ಅರ್ಹ ದಿನಗೂಲಿ ನೌಕರರನ್ನೂ ಕಾಯಂಗೊಳಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮುಖಂಡರಾದ ಹನುಮಂತು ಬೆಲವತ್ತ, ಗೋವಿಂದರಾಜು ಅಶೋಕಪುರಂ, ಸುರೇಶ್ ಯರಗನಹಳ್ಳಿ, ಪುಟ್ಟಸ್ವಾಮಿ ದೇವರಸನಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net