

ಶಿಕಾರಿಪುರ: ತಮ್ಮ ಸರ್ಕಾರದ ಆರು ತಿಂಗಳುಗಳ ವೈ-Àಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಅನುದಾನ ನೀಡಿಲ್ಲವೆಂದು ಆರೋಪಿಸಿ ರಾಜ್ಯದ ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆರೋಪಿಸಿದರು.
ಡಿ.ಕೆ.ಸುರೇಶ್ ಅವರ ರಾಷ್ಟç ವಿಭಜನೆ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಅನುದಾನದ ನೆಪವಿಟ್ಟುಕೊಂಡು ದೆಹಲಿಗೆ ಹೋಗಿ ಪ್ರತಿಭಟಿಸುತ್ತಿದ್ದಾರೆ. ಇದು ಕಾಂಗ್ರೆಸ್‌ನ ಚುನಾವಣಾ ಗಿಮಿಕ್. ರಾಜ್ಯದ ಜನರಿಗೆ ಇವರ ಆಟಗಳು ಅರ್ಥವಾಗುತ್ತವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮನಮೋಹನ್ ಸಿಂಗ್ ಆಡಳಿತಾವಽಯಲ್ಲಿ ರಾಜ್ಯಕ್ಕೆ ನೀಡಿದ ಅನುದಾನ 60 ಸಾವಿರ ಕೋಟಿ ರೂ. ಮಾತ್ರ. ಆದರೆ ಮೋದಿ ಸರ್ಕಾರ 2.70 ಲಕ್ಷ ಕೋಟಿ ರೂ. ನೀಡುತ್ತಿದೆ. ಮೊನ್ನೆ ಕೊಟ್ಟಿದ್ದು ಸಂಪೂರ್ಣ ಬಜೆಟ್ ಅಲ್ಲ. ಇದೊಂದು ಲೇಖಾನುದಾನ ಅಷ್ಟೇ. ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಉಪ ಮುಖ್ಯಮಂತ್ರಿಗಳು ಶಾಸಕರ ಜತೆಗೆ ದೆಹಲಿಗೆ ಅನುದಾನಕ್ಕಾಗಿ ಹೋರಾಡಲು ಕರೆ ನೀಡಿದರು. ಇವರಿಗೆ ಜನಪರವಾದ ಯಾವುದೇ ಕಳಕಳಿ ಇಲ್ಲ ಎಂದು ದೂರಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಯಾವುದೇ ಅನ್ಯಾಯ ಮಾಡಿಲ್ಲ. ಸಾಕಷ್ಟು ಅನುದಾನಗಳು ರಾಜ್ಯಕ್ಕೆ ಹರಿದು ಬಂದಿವೆ. ಇವರಿಗೆ ರೈತರ ಬಗ್ಗೆ ಕಳಕಳಿ ಇಲ್ಲ. ಹಾಗಿದ್ದಿದ್ದರೆ ಮೊದಲು ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದರು ಎಂದರು.
ಕೇವಲ ಬಿಟ್ಟಿ ಭಾಗ್ಯಗಳ ಮೂಲಕ ಮುಂಬರುವ ಲೋಕಸಣಾ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್‌ಗೆ ಮನದಟ್ಟಾಗಿದೆ. ಹಾಗಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಯುಪಿಎ ಸರ್ಕಾರದಲ್ಲಿ ಕೇವಲ ಸಾವಿರ ಕಿ.ಮೀ. ನಷ್ಟು ರೈಲ್ವೆ ಮಾರ್ಗ ವಿದ್ಯುದೀಕರಣವಾಗಿತ್ತು. ಮೋದಿ ಕಾಲದಲ್ಲಿ 13 ಸಾವಿರ ಕಿಲೋಮೀಟರ್‌ನಷ್ಟು ವಿದ್ಯುದೀಕರಣ ಮಾಡಲಾಗಿದೆ. ಮೋದಿ ವರ್ಚಸ್ಸು ಕಂಡು ಕಾಂಗ್ರೆಸ್ ನಡುಗಿಹೋಗಿದೆ ಎಂದು ಹೇಳಿದರು.