ಹುಸ್ಕೂರು ಗ್ರಾಪಂ ಎದುರು ಪ್ರತಿಭಟನೆ

11 mlv 1
Published on

ಮಳವಳ್ಳಿ: ಹೊರ ಜಿಲ್ಲೆಗಳಿಂದ ಗ್ರಾಮಗಳಿಗೆ ಆಗಮಿಸುವ ಜನರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪ್ರಾಂತ ರೈತ ಸಂಘ ಮತ್ತು ಕೃಷಿ ಕೂಲಿ ಕಾರ್ಮಿಕರ ಸಂಘದ ಸದಸ್ಯರು ಶುಕ್ರವಾರ ತಾಲೂಕಿನ ಹುಸ್ಕೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಕರೊನಾ ಸೋಂಕು ಗ್ರಾಮೀಣ ಪ್ರದೇಶಗಳಲ್ಲಿಯೂ ಮಿತಿಮೀರುವ ಮೊದಲು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ವಹಿಸಬೇಕು. ಸೋಂಕಿನ ಲಕ್ಷಣ ಇರುವ ಶಂಕಿತರನ್ನು ಗುರುತಿಸಬೇಕು. ಸಮುದಾಯಕ್ಕೆ ಹರಡದಂತೆ ಕ್ರಮ ವಹಿಸಬೇಕು. ಬೆಂಗಳೂರು ಸೇರಿದಂತೆ ಹೊರ ಭಾಗಗಳಿಂದ ಗ್ರಾಮಗಳಿಗೆ ಬರುವ ಎಲ್ಲರನ್ನೂ ಮನೆಯಲ್ಲಿಯೇ ಉಳಿಯುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.

ನಂತರ ಗ್ರಾಪಂ ಕಾರ್ಯದರ್ಶಿ ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು. ಪ್ರಾಂತ ರೈತ ಸಂಘದ ಹುಸ್ಕೂರು ಘಟಕದ ಅಧ್ಯಕ್ಷ ಹೊಟ್ಟೆ ಮಾರಯ್ಯ, ಕೃಷಿ ಕೂಲಿ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷೆ ಸರೋಜಮ್ಮ, ಮುಖಂಡರಾದ ಮೃತ್ಯುಂಜಯ, ಜಯರಾಮು, ಪಟೇಲ, ಯಾಲಕ್ಕಯ್ಯ, ಪುಟ್ಟಸ್ವಾಮಿ, ಸರೋಜಮ್ಮ, ಸಾಹುಕಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net