

ಹುಬ್ಬಳ್ಳಿ: ಪ್ರಮೋದ ಮುತಾಲಿಕ್ ಅವರ ಮೇಲೆ ಪ್ರಚೋದನಕಾರಿ ಭಾಷಣದ ಕೇಸ್ ಹಾಕಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಸೇನಾ ಜಿಲ್ಲಾ ಅಧ್ಯಕ್ಷ ಅಣ್ಣಪ್ಪ ದಿವಟಗಿ, ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ, ತಾಲೂಕಾಧ್ಯಕ್ಷ ಬಸು ದುರ್ಗದ, ನಗರ ಅಧ್ಯಕ್ಷ ಬಸವರಾಜ ಗೌಡರ, ಪ್ರಮುಖರಾದ ಪ್ರವಿಣ ಮಾಳದಕರ, ವಿಜಯ ದೇವರಮನಿ, ನಾಗರಾಜ ಸೌತಿಕಾಯಿ, ಪುಟ್ಟು ಜೋಶಿ, ವೀರೇಶ ಪೂಜಾರಿ, ಪರಶು ಕೋಟಗಿ, ಗುಣಧರ ದೋಡತಿ, ನಾಗರಾಜ ಹುರಕಡ್ಲಿ, ಇತರರು ಭಾಗವಹಿಸಿದ್ದರು.