ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಒತ್ತಾಯಿಸಿ ಅ.2 ರಿಂದ ಧರಣಿ

HUN-SEP-13-2(KEREHADI TRIBES MEETING)
ಹುಣಸೂರು ತಾಲೂಕು ಕೆರೆಹಾಡಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆದಿವಾಸಿ ಮುಖಂಡರು ಭಾಗವಹಿಸಿದ್ದರು. ಕೊಳವಿಗೆ ಜಯಪ್ಪ, ಹರ್ಷ, ವಿಠಲ್ ನಾಣಾಚ್ಚಿ, ಕೆಂಪಮ್ಮ, ಡಾ.ಎಸ್.ಶ್ರೀಕಾಂತ್ ಇತರರಿದ್ದರು.
Published on

ಹುಣಸೂರು: ಅ.2ರಿಂದ ತಾಲೂಕಿನಾದ್ಯಂತ ಗಿರಿಜನ ಹಾಡಿಯ ನಿವಾಸಿಗಳು, ಅವರವರ ಜಮಾ ್ಮಕಾಡಿಗೆ ಪ್ರವೇಶಿಸಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಒತ್ತಾಯಿಸಿ ಧರಣಿ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ತಿಳಿಸಿದರು.

ತಾಲೂಕಿನ ಕೆರೆಹಾಡಿಯಲ್ಲಿ ಶನಿವಾರ ಬುಡಕಟ್ಟು ಕೃಷಿಕರ ಸಂಘ ಮತ್ತು ಆದಿವಾಸಿ ಮಹಿಳಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 2 ರಿಂದ ನವೆಂಬರ್ 15 ಬಿರ್ಸಾಮುಂಡ ಜಯಂತಿ ವರೆಗೆ ಅರಣ್ಯ ಹಕ್ಕುಗಳ ಕಾಯ್ದೆ ಜಾರಿಗೆ ಆಗ್ರಹಿಸಿ ಅವರವರ ಜಮ್ಮಾ ಕಾಡಿನಲ್ಲಿ, ಹಾಡಿ ಅರಣ್ಯ ಹಕ್ಕು ಸಮಿತಿಗಳ ಮುಂದಾಳತ್ವದಲ್ಲಿ ಧರಣಿ ನಡೆಸಲಾಗುವುದು. ಕೊಳವಿಗೆ ಹಾಡಿ ಚಾಮಳ್ಳಿ ಕಾಡು, ಬಿಲ್ಲೇನ ಹೊಸಹಳ್ಳಿ ಚೌಡಮ್ಮ ಕಾಡು, ವೀರನ ಹೊಸಹಳ್ಳಿ ಮಂಟಳ್ಳಿ ಕಾಡನ್ನು ಪ್ರವೇಶಿಸಿ ಶ್ರದ್ಧಾಕೇಂದ್ರಗಳಲ್ಲಿ ಪೂಜೆ ಸಲ್ಲಿಸಿ ಧರಣಿ ಕುಳಿತು ಅರಣ್ಯ ಹಕ್ಕುಗಳಿಗೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಅರಣ್ಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿ ದಶಕ ಕಳೆದಿದೆ, ಕಾನೂನುಬಾಹಿರ ಕಾರಣ ನೀಡಿ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇದು ಆದಿವಾಸಿಗಳಿಗೆ ಬಹುದೊಡ್ಡ ಅನ್ಯಾಯವಾಗಿದೆ. ಹೈಕೋರ್ಟ್‌ನ ಆದೇಶಕೂಡ ಜಾರಿ ಮಾಡದೆ 3418 ಆದಿವಾಸಿ ಕುಟುಂಬಗಳಿಗೆ ಮರು ವಸತಿ ನೀಡಿಲ್ಲ. ಅದಕಾರಣ ಕಾಡಲ್ಲಿಯೇ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಪ್ರತಿ ಮೂರು ತಿಂಗಳಿಗೊಂದು ಸಭೆ: ಹಾಡಿಗಳ ಮಟ್ಟದಲ್ಲಿ ಸಂಘ, ಮಹಿಳಾ ಸಂಘಗಳ ಘಟಕಗಳನ್ನು ಸ್ಥಾಪಿಸಲು ತೀರ್ಮಾನ ಕೈಗೊಂಡು ಪ್ರತಿ 3 ತಿಂಗಳಿಗೊಮ್ಮೆ ಆಯಾಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಡಿ ಯಜಮಾನರು, ಗಿಡಮೂಲಿಕೆ ತಜ್ಞರು, ಕಲಾಕಾರರು, ವಿದ್ಯಾರ್ಥಿ ಮುಖಂಡರು ಇವರುಗಳನ್ನು ಆಹ್ವಾನಿಸಿ ಸಂಘಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಆದಿವಾಸಿಗಳ ಅನುಭೋಗದಲ್ಲಿರುವ ಕೆಲವು ಹಾಡಿಗಳ ಕಂದಾಯ ಭೂಮಿಗೆ ಮನವಿ ಮಾಡಿದ್ದರೂ ಹಕ್ಕುಪತ್ರ ನೀಡಿಲ್ಲ. ಆದಿವಾಸಿಗಳ ಅನುಭವದಲ್ಲಿರುವ ಭೂಮಿಗೆ ಬೇರೆಯವರು ಹಕ್ಕು ಪತ್ರ ಹೊಂದಿದ್ದಾರೆ, ಇವನ್ನು ರದ್ದು ಪಡಿಸಬೇಕು, ಅನಧೀಕೃತರನ್ನು ತೆರವುಗೊಳಿಸಿ ಆದಿವಾಸಿಗಳಿಗೆ ಸ್ವಾಧೀನ ನೀಡಬೇಕು.

ಸಭೆಯಲ್ಲಿ ಅದಿವಾಸಿ ಮುಖಂಡರಾದ ಹರ್ಷ, ವಿಠಲ್, ಅಣ್ಣಯ್ಯ, ಕೆಂಪಮ್ಮ, ಸೀತೆ, ಡೀಡ್ ಶ್ರೀಕಾಂತ್, ಪ್ರಕಾಶ್, ಮಾನವ ಮಂದಿರ್ ಶ್ರೀಕಂಠ, ಹಾಡಿ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net