ಸಹಾಯಧನ ಬಿಡುಗೆಡೆಗೆ ಒತ್ತಾಯಿಸಿ ಪ್ರತಿಭಟನೆ

15MDG2
Published on

ಮುಂಡರಗಿ: ವಾಜಪೇಯಿ ನಗರ ವಸತಿ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ಮಂಜೂರು ಮಾಡಬೇಕು ಎಂದು ಪಟ್ಟಣದ ಪುರಸಭೆ ಕಚೇರಿ ಮುಂದೆ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ವಾಜಪೇಯಿ ನಗರ ವಸತಿ ಯೋಜನೆಯಿಂದ ಮನೆ ನಿರ್ವಿುಸಿಕೊಳ್ಳುತ್ತಿರುವ ಬಹುತೇಕ ಫಲಾನುಭವಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಇದುವರೆಗೆ ಸಹಾಯಧನ ಬಿಡುಗಡೆಗೊಳಿಸಿಲ್ಲ. ಸಹಾಯಧನ ನಂಬಿಕೊಂಡು ಕೆಲವರು ಸಾಲ ಮಾಡಿ ಮನೆ ನಿರ್ವಿುಸಿಕೊಂಡಿದ್ದಾರೆ. ಈಗ ಸಹಾಯ ಧನ ಮಂಜೂರಾಗದೆ ಇರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು

ಮಾ. 30ರೊಳಗೆ ಸಹಾಯಧನ ಮಂಜೂರು ಮಾಡದಿದ್ದರೆ 31ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿ, ಮುಖ್ಯಾಧಿಕಾರಿ ಎನ್.ಕೆ. ಡೊಂಬರ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಚಂದ್ರಶೇಖರ ಪೂಜಾರ, ಸುರೇಶ ಕಂಚಗಾರ, ಲಕ್ಷ್ಮವ್ವ ಜಕ್ಕಲಿ, ಗೂಳಪ್ಪ ಲದ್ದಿ, ಶಂಭುಲಿಂಗಪ್ಪ ಬಂಡಿ, ದುರುಗಪ್ಪ ವಾಡಗನ್, ಸುರೇಶ ಸವದತ್ತಿ, ದುರುಗಪ್ಪ ಕಟ್ಟಿಮನಿ, ವಿಜಯಕುಮಾರ ಡಂಬಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net