ಆ. 4ರಂದು ಕಾರ್ಮಿಕ ಭವನ ಚಲೋ,  ಅನಿರ್ದಿಷ್ಟಾವಧಿ ಧರಣಿ

Published on

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಧಾರವಾಡ ವಿಭಾಗದ ಕಟ್ಟಡ ಕಾರ್ಮಿಕರ ಸಂಘಗಳಿಂದ ಆ. 4ರಂದು ಕಾರ್ಮಿಕ ಭವನ ಚಲೋ ಹಾಗೂ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ.
ಕಟ್ಟಡ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಅವುಗಳ ಸಮರ್ಪಕ ಜಾರಿಯಾಗುತ್ತಿಲ್ಲ. ಶೈಕ್ಷಣಿಕ ಧನಸಹಾಯ, ಹಿರಿಯ ನಾಗರಿಕರಿಗೆ ಪಿಂಚಣಿ, ಮಂಜೂರಾದ ವಿವಿಧ ಧನಸಹಾಯಗಳ ಹಣ ಬಿಡುಗಡೆ, ಇಲಾಖೆಯ ತಂತ್ರಾಂಶ ದೋಷ ಸರಿಪಡಿಸುವುದು, ಆರೋಗ್ಯ ತಪಾಸಣೆ ಟೂಲ್ ಕಿಟ್ ವಿತರಣೆ ಸೇರಿ ವಿವಿಧ ಬೇಡಿಕೆಗಳಿಗಾಗಿ ಧರಣಿ ನಡೆಸಲಾಗುವುದು.

ಆ. 4ರಂದು ಬೆಳಗ್ಗೆ 11ಕ್ಕೆ ಹುಬ್ಬಳ್ಳಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸುಮಾರು 2 ಸಾವಿರ ಕಾರ್ಮಿಕರು ಮೆರವಣಿಗೆ ಹೊರಟು, ಚನ್ನಮ್ಮ ವೃತ್ತದ ಮೂಲಕ ಘೋಷಣೆಗಳನ್ನು ಕೂಗುತ್ತ ಗೋಕುಲ ರಸ್ತೆಯಲ್ಲಿರುವ ಕಾರ್ಮಿಕ ಭವನಕ್ಕೆ ತೆರಳಲಾಗುವುದು.

ಅಲ್ಲಿ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ದುರಗಪ್ಪ ಚಿಕ್ಕತುಂಬಳ, ಸಂಘಟನಾ ಕಾರ್ಯದರ್ಶಿ ಶಿವಾನಂದ ಅಸೂಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net