ಹಾವೇರಿ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆಗೆ ಪಟ್ಟು; ಶಿವಕುಮಾರ ತಾವರಗಿ ಬೆಂಬಲಿಗರಿಂದ ಪ್ರತಿಭಟನೆ

Tavaragi protest
Published on

ಹಾವೇರಿ: ಹಾವೇರಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರನ್ನು ಬದಲಾಯಿಸಬೇಕು. ಶಿವಕುಮಾರ ತಾವರಗಿ ಅವರಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿ ತಾವರಗಿ ಬೆಂಬಲಿಗರು ನಗರದಲ್ಲಿ ಗುರುವಾರ ಪ್ರತಿಭಟಿಸಿದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಅಭಿಮಾನಿಗಳು ಹಾಗೂ ತಾವರಗಿ ಬೆಂಬಲಿಗರು, ಹಾವೇರಿ ತಾಲೂಕಿನ ಸಮಗ್ರ ಅಭಿವೃದ್ಧಿಯ ಸಲುವಾಗಿ ಘೋಷಿತ ಅಭ್ಯರ್ಥಿಯನ್ನು ಬದಲಿಸಬೇಕು. ಪಕ್ಷಕ್ಕಾಗಿ ದುಡಿದ ಮಾಜಿ ಪೊಲೀಸ್ ಅಧಿಕಾರಿ ತಾವರಗಿ ಅವರಿಗೆ ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿದರು. ಅಭ್ಯರ್ಥಿ ಬದಲಾವಣೆಯ ಪ್ಲೇಕಾರ್ಡ್ ಪ್ರದರ್ಶಿಸಿದರು. ಅಂಚೆ ಮೂಲಕ ಕೆಪಿಸಿಸಿ ಹಾಗೂ ಎಐಸಿಸಿ ಅಧ್ಯಕ್ಷರಿಗೆ ಪತ್ರ ರವಾನಿಸಿದರು.
ಪ್ರತಿಭಟನೆಯಲ್ಲಿ ನಿಂಬಣ್ಣ ಯತ್ತಿನಹಳ್ಳಿ, ಪಕ್ಕೀರೇಶ ಕಡಕೋಳ, ವಿಜಯ ಹತ್ತಿಮತ್ತೂರ, ರಾಜು ವಡ್ಮಕ್ಕನವರ, ವಿಜಯ ಹರಿಜನ, ಯಲ್ಲಪ್ಪ ಜಲ್ಲಾಪುರ, ವಿಜಯ ವಲದವರ, ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net