ಮೊರಾರ್ಜಿನಗರ ನಾಗರಿಕರಿಂದ 9ರಂದು ಪ್ರತಿಭಟನೆ

Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಮೊರಾರ್ಜಿ ನಗರಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಮೊರಾರ್ಜಿ ನಗರ 2ನೇ ಹಂತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜುಲೈ 9ರಂದು ಬೆಳಗ್ಗೆ 11ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ರಸ್ತೆಗಳ ಡಾಂಬರೀಕರಣ, ಗಾರ್ಡನ್ ಅಭಿವೃದ್ಧಿ ಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಲಾಗುವುದು.

ಸಂಘದ ಅಧ್ಯಕ್ಷ ನಾಗರಾಜ ನಾಡಕರ್ಣಿ, ಎಸ್.ಎಲ್. ರಾಯ್ಕರ, ಮದನ ಕಾಳೆ, ರವಿ ಅರ್ಕಸಾಲಿ, ವೀರಣ್ಣ ಬಡಿಗೇರ, ಕಲ್ಲಪ್ಪ ಹೊನ್ನಳ್ಳಿ, ಗಂಗಪ್ಪ ಕುಲ್ಲಳ್ಳಿ, ಮಹಿಳಾ ಮಂಡಳದ ಸದಸ್ಯರು ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net