ಉದಯನಿಧಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

bjp strike
Published on

ಹೊನ್ನಾವರ: ಸನಾತನ ಹಿಂದು ಧರ್ಮದ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಶರಾವತಿ ವೃತ್ತದಲ್ಲಿ ಉದಯನಿಧಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಭಂಡಾರಿ ಮಾತನಾಡಿ, ಈ ಹಿಂದಿನಿಂದಲೂ ಸನಾತನ ಧರ್ಮದ ಬಗ್ಗೆ ಕೆಲವರು ಅತ್ಯಂತ ಕೆಟ್ಟದಾಗಿ ಮಾತಾಡುವ ಪ್ರವೃತ್ತಿ ಬೆಳೆಸಿಕೊಂಡು ಬಂದಿದ್ದಾರೆ. ಈಗ ಉದಯನಿಧಿ ಸ್ಟಾಲಿನ್ ಮತ್ತು ಡಿಎಂಕೆ ಸಂಸದ ಎ. ರಾಜಾ ಅವಹೇಳನ ಮಾಡಿದ್ದಾರೆ. ಸುಪ್ರೀಂಕೋರ್ಟ್ ಇವರ ವಿರುದ್ಧ ಸ್ವಯಂ ಪ್ರೇರಿತವಾಗಿ ಸುಮೊಟೋ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದರು.

ನಂತರ ತಹಸೀಲ್ದಾರ್ ರವಿರಾಜ ದೀಕ್ಷಿತ್ ಅವರಿಗೆ ಮನವಿ ಸಲ್ಲಿಸಿದರು. ಬಿಜೆಪಿ ಕಾರ್ಯದರ್ಶಿ ಮಂಜುನಾಥ ನಾಯ್ಕ, ಎಂ.ಎಸ್. ಹೆಗಡೆ ಕಣ್ಣಿ, ಪ.ಪಂ. ಸದಸ್ಯರಾದ ಶಿವರಾಜ ಮೇಸ್ತ, ವಿಜಯ ಕಾಮತ್, ಭಾಗ್ಯ ಮೇಸ್ತ, ಸುಜಾತಾ ಮೇಸ್ತ, ಉಲ್ಲಾಸ ನಾಯ್ಕ, ನಾರಾಯಣ ಹೆಗಡೆ, ಬಿ.ಟಿ. ಗಣಪತಿ, ಹರಿಶ್ಚಂದ್ರ ನಾಯ್ಕ, ವಿಘ್ನೇಶ್ವರ ಹೆಗಡೆ, ಉಮೇಶ್ ಸಾರಂಗ, ರಾಜೇಶ್ ಸಾಳೆಹಿತ್ತಲ್, ರವಿ ನಾಯ್ಕ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net