ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ

IMG-20250514-WA0102
Published on

ಸಾಲಿಗ್ರಾಮ: ಮನೆ ಪಕ್ಕವಿರುವ ರೇಣುಕಮ್ಮ ಎಂಬುವರ ನಿವೇಶನದಲ್ಲಿ ಮರವೊಂದು ಬೆಳೆದಿದ್ದು, ಇದನ್ನು ತೆರವುಗೊಳಿಸುವಂತೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದಿರುವ ತಾಲೂಕು ಕಚೇರಿ ಅಧಿಕಾರಿಗಳ ವಿರುದ್ಧ ತಾಲೂಕು ವಾಲ್ಮೀಕಿ ನಾಯಕರ ಸಂಘದ ನೇತೃತ್ವದಲ್ಲಿ ರಾಮನಾಯಕರ ಕುಟುಂಬಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕಳೆದ ಏಳು ವರ್ಷಗಳಿಂದ ಪರಿಹಾರವಾಗದ ಸಮಸ್ಯೆಯನ್ನು ಮುಂದಿಟ್ಟು ಅನಾಹುತ ಸಂಭವಿಸುವ ಮುನ್ನವೇ ಪರಿಹಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಕಚೇರಿಯ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಸಮೀಪದ ರಾಂಪುರ ಬಡಾವಣೆಯಲ್ಲಿ ವಾಸವಿರುವ ರಾಮನಾಯಕ ಅವರ ನಿವಾಸದ ಮುಂಭಾಗ ರೇಣುಕಮ್ಮ ಎಂಬುವರ ಖಾಲಿ ನಿವೇಶನವಿದೆ. ಇಲ್ಲಿ ಮರವೊಂದು ಬೆಳೆದಿದ್ದು, ಇದು ಮನೆ ಮೇಲೆ ಬೀಳುವ ಆತಂಕವಿದೆ. ಹಾಗಾಗಿ, ಈ ಮರ ತೆರವುಗೊಳಿಸುವಂತೆ ರಾಮನಾಯಕ ಅವರ ಕುಟುಂಬಸ್ಥರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದರೆ, ಯಾವ ಅಧಿಕಾರಿಯೂ ಇತ್ತ ಗಮನಹರಿಸಿ ಸಮಸ್ಯೆ ಪರಿಹರಿಸಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಶಿರಸ್ತೇದಾರ್ ಸತೀಶ್ ತಿಮ್ಮಯ್ಯ, ತಾಲೂಕು ಶ್ರೀ ವಾಲ್ಮೀಕಿ ನಾಯಕರ ಸಂಘದ ಉಪಾಧ್ಯಕ್ಷ ವೆಂಕಟೇಶ್ ನಾಯಕ, ಕಾರ್ಯದರ್ಶಿ ಮಂಜುನಾಥ್, ನೌಕರರ ಸಂಘದ ಕಾರ್ಯದರ್ಶಿ ಸುರೇಶ್, ಶಂಕರನಾಯಕ, ರಾಂಪುರ ಲೋಕೇಶ್, ಕೃಷ್ಣನಾಯಕ, ಲೋಕೇಶ್, ನಟರಾಜ, ಕುಬೇರ, ಶಿವಣ್ಣ, ಸ್ವಾಮಿ ನಾಯಕ, ಮಹದೇವ ನಾಯಕ, ಸಾ.ರಾ.ಸತೀಶ್, ಪುರಿ ಗೋವಿಂದರಾಜು, ಹರೀಶ್, ಶ್ರೀನಿವಾಸ್, ರಾಮಚಂದ್ರ, ಮಿರ್ಲೆ ವೆಂಕಟೇಶ್, ತಿಮ್ಮನಾಯಕ, ಶಿವುನಾಯಕ, ಮಲ್ಲಿಕಾರ್ಜುನ, ದಿನೇಶ್, ಡಿ.ದೇವರಾಜ್ ಸಹನ, ಲಕ್ಷ್ಮೀ, ತಾಯಮ್ಮ, ಪವನ್, ಕಪ್ನಿನಾಯಕ, ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net