ಪ್ರೌಢಶಾಲೆ ಆರಂಭಿಸಲು ಒತ್ತಾಯಿಸಿ ಪ್ರತಿಭಟನೆ

MDG PRATIBHATANE
Published on

ಮುಂಡರಗಿ: ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಪ್ರಾರಂಭಿಸಲು ಸರ್ಕಾರ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿ ಸ್ಥಳೀಯ ನಾಗರಿಕರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ಕೈಗೊಳ್ಳಲಾಗಿದೆ.

ಸಾಮಾಜಿಕ ಕಾರ್ಯಕರ್ತ ದೇವಪ್ಪ ಇಟಗಿ ಮಾತನಾಡಿ, ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಪ್ರಾರಂಭಿಸಬೇಕೆಂದು ಬಹುದಿನದಿಂದ ಹೋರಾಟ ಮಾಡುತ್ತಿದ್ದರೂ ಈವರೆಗೂ ಆಗದಿರುವುದು ವಿದ್ಯಾರ್ಥಿಗಳ ಪಾಲಕರಿಗೆ ನೋವಿನ ಸಂಗತಿಯಾಗಿದೆ. ಸರ್ಕಾರಿ ಪ್ರೌಢಶಾಲೆ ಪ್ರಾರಂಭಗೊಂಡರೆ ಎಲ್ಲ ವರ್ಗದ ಜನರಿಗೆ ತಮ್ಮ ಮಕ್ಕಳ ಶಿಕ್ಷಣಕ್ಕೆ ಅನುಕೂಲಕರವಾಗಲಿದೆ. ಮಾ. 7ರಂದು ಮಂಡಿಸಲಾಗುವ ರಾಜ್ಯ ಸರ್ಕಾರದ ಬಜೆಟ್​ನಲ್ಲಿ ಮುಂಡರಗಿಯಲ್ಲಿ ಸರ್ಕಾರಿ ಪ್ರೌಢಶಾಲೆಗೆ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿ, ಈ ಪ್ರತಿಭಟನೆಯನ್ನು ಮಾ. 7ರವರೆಗೂ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಸಿದ್ದಪ್ಪ ಮುದ್ಲಾಪೂರ, ಕುರುವತ್ತೆಪ್ಪ ಅರಿಷಣದ, ಪ್ರಹ್ಲಾದಗೌಡ ಪಾಟೀಲ, ಲಕ್ಷ್ಮಣ ಗಾಜಿ, ಸುರೇಶ ಬಾರಿಗಿಡದ, ಅಶೋಕ ರಡ್ಡೇರ, ಬಸವರಾಜ ಹಿರೇಮಠ, ರಮೇಶ ಜಾಲಗಾರ, ಕರಿಂಸಾಬ್ ನಿಷೇಕಾನವರ, ಡಿ.ಎಸ್. ಇಟಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net