ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆ

FotoJet shashi 2
Published on

ದೊಡ್ಡಬಳ್ಳಾಪುರ ತಾಪಂಗೆ ಬಚ್ಚಹಳ್ಳಿ ಗ್ರಾಮಸ್ಥರಿಂದ ಮುತ್ತಿಗೆ

ದೊಡ್ಡಬಳ್ಳಾಪುರ : ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ನಿವೇಶನಗಳನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಬಚ್ಚಹಳ್ಳಿ ಗ್ರಾಮಸ್ಥರು ತಾಲೂಕು ಪಂಚಾಯಿತಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಚ್ಚಹಳ್ಳಿ ನಾಗರಾಜ್​ ಮಾತನಾಡಿ, ದೇವನಹಳ್ಳಿ ವಿಧಾನಸಭಾ ೇತ್ರದ ದೊಡ್ಡಬಳ್ಳಾಪುರ ತಾಲೂಕಿನ ಪಂಚಾಯಿತಿ ವ್ಯಾಪ್ತಿಯ ಬಚ್ಚಹಳ್ಳಿ ಸರ್ವೇ ನಂ.10ರಲ್ಲಿ 5 ಎಕರೆ ಭೂಮಿಯನ್ನು ಆಶ್ರಯ ನಿವೇಶನಗಳಿಗಾಗಿ ಅಭಿವೃದ್ಧಿಪಡಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ತಯಾರಿ ನಡೆಸುತ್ತಿದ್ದು, ಈ ಹಿಂದೆ ಸರ್ಕಾರದಿಂದ ಅಲ್ಪಜಾಗವನ್ನು ಮಂಜೂರು ಪಡೆದಿರುವ ಕುಟುಂಬಗಳು ಫಲಾನುಭವಿ ಆಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಆದರೆ ಹತ್ತಾರು ಎಕರೆ ಭೂಮಿ ಹೊಂದಿರುವ ಆರ್ಥಿಕವಾಗಿ ಸಬಲರಾಗಿರುವ ಹಲವು ಕುಟುಂಬಗಳಿಗೆ ನಿವೇಶನ ಕಲ್ಪಿಸಲು ಮುಂದಾಗಿರುವುದು ಖಂಡನೀಯ. ಹೀಗಾಗಿ ಮೊದಲು ಆದ್ಯತೆಯಾಗಿ 10*10 ಜಾಗದಲ್ಲಿ ವಾಸ ಮಾಡುತ್ತಿರುವ 35ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ಬೀಕರಿಸಿದ ತಾಲೂಕು ಪಂಚಾಯತಿ ಮುಖ್ಯಾಧಿಕಾರಿ ಮಂಜುನಾಥ ಅತ್ತಿ ಮಾತನಾಡಿ, ಎಲ್ಲ ಅರ್ಜಿಗಳನ್ನ ಪರಿಶೀಲಿಸಿ, ಪಿಡಿಒ ಬಳಿಯಿಂದ ವರದಿ ಪಡೆದುಕೊಂಡು ಮೇಲಾಧಿಕಾರಿಗಳ ಬಳಿ ಚರ್ಚಿಸಿ ತೀರ್ಮಾನಕೈಗೊಳ್ಳಲಾಗುವುದು ಎಂದರು.

ಹಕ್ಕೊತ್ತಾಯಗಳು

1.ನೈಜ ಫಲಾನುಭವಿಗಳ ಆಯ್ಕೆಗಾಗಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳನ್ನು ಒಳಗೊಂಡಂತೆ ಸಮಿತಿ ರಚಿಸಬೇಕು

2.ಈ ಸಮಿತಿಯು ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಬೇಕು

3.ಈ ಹಿಂದೆ ನಡೆದ ಗ್ರಾಮ ಸಭೆಯಲ್ಲಿ ಅನುಮೋದನೆಗೊಂಡಿರುವ ಫಲಾನುಭವಿಗಳ ಪಟ್ಟಿ ಮತ್ತು ಈಗ ಆನ್​ ಲೈನ್​ ನಲ್ಲಿರುವ ನಿವೇಶನ ರಹಿತ ಫಲಾನುಭವಿಗಳ ಪಟ್ಟಿ ಎರಡನ್ನೂ ಪರಿಷ್ಕರಿಸಿ ಅಂತಿಮ ಪಟ್ಟಿ ಸಿದ್ಧಗೊಳಿಸಬೇಕು

4.ಸಮಿತಿಯು ಪ್ರತಿ ಮನೆಯ ಸಮೀೆ ಮಾಡಿ. ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಸಾಮಾಜಿಕ ನ್ಯಾಯದ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು

5.ಈಗಿರುವ 20*30 ಅಳತೆಗೆ ಬದಲಾಗಿ 20*60 ಅಳತೆಯ ನಿವೇಶನಗಳನ್ನು ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net