ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

Protest demanding salary
Published on

ಮಡಿಕೇರಿ:

ವೇತನ ದೊರಕದ ಕಾರಣಕ್ಕೆ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕಳೆದ ಐದು ತಿಂಗಳಿAದ ವೇತನ ದೊರಕದ ಕಾರಣ ಈಗ ಪ್ರತಿಭಟನೆಗೆ ಇಳಿದಿದ್ದಾರೆ.

ಕಾಲೇಜಿನಲ್ಲಿ ಮಂಗಳೂರು ವಿವಿಯ ಅಡಿಯಲ್ಲಿ ಸುಮಾರು 45ಕ್ಕೂ ಅಧಿಕ ಮಂದಿ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಆದರೆ ಕಳೆದ ಐದು ತಿಂಗಳಿನಿAದ ಉಪನ್ಯಾಸಕರಿಗೆ ವೇತನ ಆಗಿಲ್ಲ. ಇದರಿಂದ ಬೇಸತ್ತ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಕಾಲೇಜಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾತೆ.
ನಾವು ವರ್ಷದಲ್ಲಿ ಹತ್ತು ತಿಂಗಳು ಮಾತ್ರ ಕೆಲಸ ಮಾಡುತ್ತೇವೆ. ಪ್ರತಿ ವರ್ಷ ಕೂಡ ನಮಗೆ ಸಂದರ್ಶನ ಮಾಡಿ ನೇಮಕ ಮಾಡಿಕೊಳ್ಳಲಾಗುತ್ತದೆ. 25 ವರ್ಷ ಕೆಲಸ ಮಾಡುತ್ತಿರುವವರೂ ಕೂಡ ಇದ್ದೇವೆ. ಆದರೆ ನಮಗೆ ಸೂಕ್ತ ಕಾಲಕ್ಕೆ ವೇತನ ದೊರಕುತ್ತಿಲ್ಲ. ಇದರಿಂದ ನಮ್ಮ ಜೀವನ ನಿರ್ವಹಣೆ ತೀರಾ ಕಷ್ಟವಾಗಿದೆ ಎಂದು ಅತಿಥಿ ಉಪನ್ಯಾಸಕರು ತಮ್ಮ ಅಳಲು ತೋಡಿಕೊಂಡರು.


ಈ ಸಂದರ್ಭ ಕಾಲೇಜಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಸೋಮಣ್ಣ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ಐದು ತಿಂಗಳಿAದ ನಮಗೆ ವೇತನ ದೊರಕಿಲ್ಲ. ಕೊರೋನಾ ಸಂಬಳ ಕೂಡ ಈ ವರೆಗೆ ನೀಡಿಲ್ಲ. ನಾವು ಮಕ್ಕಳ ಹಿತ ದೃಷ್ಟಿಯಿಂದ ಪರೀಕ್ಷೆ, ಮೌಲ್ಯಮಾಪನ, ಮೇಲ್ವಿಚಾರಣೆ ಸೇರಿದಂತೆ ಹಲವು ಕೆಲಸ ಮಾಡಿದ್ದೇವೆ. ಆದರೂ ನಮಗೆ ವೇತನ ನೀಡದೆ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.

ವೇತನ ನೀಡುವಂತೆ ಈಗಾಗಲೇ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಸಾವಿರಾರು ರುಪಾಯಿ ಖರ್ಚು ಮಾಡಿ ತೆರಳಿ ಸಂಬAಧಿಸಿದವರಿಗೆ ಮನವಿ ಮಾಡಿಕೊಂಡರೂ ನಮಗೆ ಯಾವುದೇ ಸ್ಪಂದನೆ ದೊರಕಿಲ್ಲ. ಆದ್ದರಿಂದ ನಾವು ಶಾಂತ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ವಿಶ್ವ ವಿದ್ಯಾನಿಲಯ ಹಾಗೂ ಕಾಲೇಜಿಗೆ ಅಗೌರವ ತರುವ ಕೆಲಸ ಮಾಡುತ್ತಿಲ್ಲ. ಬದಲಾಗಿ ನಮ್ಮ ದುಡಿಮೆಯ ವೇತನವನ್ನು ಮಾತ್ರ ಮೌನ ರೀತಿಯಲ್ಲಿ ಪ್ರತಿಭಟಿಸುವ ಮೂಲಕ ಕೇಳುತ್ತಿದ್ದೇವೆ. ನಮಗೆ ವೇತನ ದೊರಕುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.

ಅತಿಥಿ ಉಪನ್ಯಾಸಕ ಮಧುಕರ್ ಮಾತನಾಡಿ ಎನ್‌ಇಟಿ, ಸ್ಲಟ್, ಪಿಎಚ್ ಡಿ ಪಡೆದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೂ ನಮಗೆ ವಿಶ್ವ ವಿದ್ಯಾನಿಲಯದಿಂದ ವೇತನ ನೀಡದೆ ದುಡಿಸಿಕೊಳ್ಳಲಾಗುತ್ತಿದೆ. ಇದೀಗ ಅಕ್ಟೋಬರ್ ಒಂದು ತಿಂಗಳ ಸಂಬಳ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ನಮಗೆ ಪೂರ್ತಿ ವೇತನ ನೀಡುವ ವರೆಗೆ ನಾವು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net