ರಸ್ತೆ ದುರಸ್ತಿ ಆಗ್ರಹಿಸಿ ಪ್ರತಿಭಟನೆ

New Project (1)
Published on

ಸುಳ್ಯ: ಸುಳ್ಯ ನಗರದ ಪ್ರಮುಖ ರಸ್ತೆಯಾದ ಹಳೆಗೇಟು- ಜಯನಗರ ರಸ್ತೆಯ ದುರವಸ್ಥೆಯನ್ನು ಖಂಡಿಸಿ, ಕೂಡಲೇ ರಸ್ತೆ ಅಭಿವೃದ್ಧಿ ಮಾಡಿ ಸಂಚಾರ ಯೋಗ್ಯವಾಗಿ ಮಾಡಬೇಕು ಎಂದು ಆಗ್ರಹಿಸಿ ಹಳೆಗೇಟು, ಜಯನಗರ ಪರಿಸರದ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ 3ನೇ ಮತ್ತು 19ನೇ ವಾರ್ಡ್ ಸಂಪರ್ಕಿಸುವ ರಸ್ತೆ ಹದಗೆಟ್ಟಿರುವುದನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಲಾಯಿತು. ನಗರದ ಪ್ರಮುಖ ರಸ್ತೆ ಇದಾಗಿದ್ದು ಇದರ ಅಭಿವೃದ್ಧಿಗೆ ನಗರ ಪಂಚಾಯಿತಿ ಮುಂದಾಗಬೇಕು. ಶಾಸಕರು, ಸಂಸದರು ವಿಶೇಷ ಅನುದಾನ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರಮುಖರಾದ ರಾಕೇಶ್ ಕುಂಟಿಕಾನ, ಬೆಟ್ಟ ಜಯರಾಮ ಭಟ್, ಮುದ್ದಪ್ಪ ಜಯನಗರ, ರಂಜಿತ್ ಕುಮಾರ್, ಜೂಲಿಯಾ ಕ್ರಾಸ್ತಾ, ನಗರ ಪಂಚಾಯಿತಿ ಸದಸ್ಯ ಶರೀಫ್ ಕಂಠಿ ಮಾತನಾಡಿದರು. ನಪಂ ಸದಸ್ಯ ಬಾಲಕೃಷ್ಣ ಭಟ್, ಅಶ್ರಫ್ ಸಂಗಮ್, ತಾರಾ ಆರ್.ರೈ, ರಾಮಚಂದ್ರ, ಪ್ರಸನ್ನ, ಸುಂದರ ಕುದ್ಪಾಜೆ, ರಮೇಶ್ ಪೂಜಾರಿ, ಶಫೀಕ್ ಜಯನಗರ, ಮಹಮ್ಮದ್ ಮುಟ್ಟತ್ತೋಡಿ, ನವಾಝ್ ಪಂಡಿತ್, ಅಬ್ದುಲ್ಲಾ, ಓಸಾಲ್ಡ್ ಕ್ರಾಸ್ತಾ, ಉಸ್ಮಾನ್ ಜಯನಗರ ಇದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಮನವಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net