

ರಾಯಚೂರು ಭೌದ್ದ ಧರ್ಮಿಯರ ಪವಿತ್ರ ಸ್ಥಳವಾದ ಬುದ್ದಗಯಾವನ್ನು ಬೌದ್ಧಧರ್ಮಿಯರ ಸುಪರ್ದಿಗೆ ನೀಡಿ ಬಿ.ಟಿ. ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜೂ.9 ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆಂದು ಚಲವಾದಿ ಸಮುದಾಯದ ಗೌರವಾಧ್ಯಕ್ಷ ರವೀಂದ್ರನಾಥ ಪಟ್ಟಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದಾರ್ಥರಾಗಿದ್ದ ಬುದ್ದರಿಗೆ ಜ್ಞಾನೋದಯವಾದ ಸ್ಥಳವಾದ ಬುದ್ದಯಾಗ ಬಿ.ಟಿ.ಕಾಯ್ದೆಯಡಿ ನಾಲ್ಕು ಜನರು ಬುದ್ದ ಧರ್ಮಿಯುರು ಹಾಗೂ ಇತರೆ ನಾಲ್ಕು ಹಿಂಧೂಧರ್ಮವರನ್ನು ನೇಮಿಸಲಾಗುತ್ತಾ ಬರಲಾಗಿದೆ. ಸಂವಿಧಾನ ಜಾರಿಯಾದರೂ ಸಂವಿಧಾನ ಕಲಂ 13 ರದ್ದುಗೊಳಿಸದೇ ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬೌಧ್ದಧರ್ಮಿಯರಿಗೆ ಅನ್ಯಾಯ ಮಾಡಿ ವಿರೋಧಿಗಳಾಗಿವೆ ಎಂದರು.
ಬುದ್ದಗಯಾವನ್ನು ಬುದ್ದಸೂರ್ ಎಂದು ಬದಲಾವಣೆ ಮಾಡುವ ಹುನ್ನಾರುಗಳು ಪ್ರಾರಂಭವಾಗಿದ್ದು ಬೌದ್ದಧಮಿರ್ಯರಿಂದ ಬುದ್ದಗಯಾವನ್ನು ಕಿತ್ತಿಕೊಳ್ಳುವ ಕುತಂತ್ರಗಳು ನಡೆಯುತ್ತಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಬಿಹಾರ ರಾಜ್ಯ ಸರ್ಕಾರಗಳು ನ್ಯಾಯ ಕೊಡಿಸುವ ಬದಲು ಪ್ರತಿಭಟನೆ ನಡೆಸುವವರನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ಮಾಡುತ್ತಿರುವದು ಖಂಡನೀಯವಾಗಿದೆ ಎಂದರು.
ಬುದ್ದ ಯಾಗದಲ್ಲಿ ಮಾತ್ರ ಬೌಧ್ಧದರ್ಮರೊಂದಿಗೆ ಹಿಂದೂಗಳನ್ನು ಸೇರಿ ವಂಚಿಸಲಾಗಿದೆ. ಕೂಡಲೇ ಬಿ.ಟಿ.ಕಾಯ್ದೆ ರದ್ದುಗೊಳಿಸುವದು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಯುವ ಪ್ರತಿಭಟನೆಯಲ್ಲಿ ಬೌದ್ದಧರ್ಮಿಯರು ಅನುಯಾಯಿಗಳು, ವಿವಿಧ ರಾಜಕೀಯ ಪಕ್ಷಗಳು, ಸರ್ಕಾರಿ ನೌಕರರು, ದಲಿತ ಸಂಘಟನೆಗಳು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಆರ್.ಭೇರಿ, ರವಿಕುಮಾರ ರಾಂಪೂರು, ಜಗನ್ನಾಥ ಸುಂಕಾರಿ, ದೇವೆಂದ್ರಪ್ಪ, ಬಸವರಾಜ, ತಿಮ್ಮಾರೆಡ್ಡಿ, ಶೇಖರ ರಾಂಪೂರ, ವೆಂಕಟೇಶ ಇದ್ದರು.