ಧರ್ಮಗುರಗಳ ಬಿಡುಗಡೆ ಆಗ್ರಹಿಸಿ ಪ್ರತಿಭಟನೆ

Protest demanding release of clerics
ಮುಸ್ಲಿಂ ಧರ್ಮಗುರು ಮುಪ್ತಿಸಲ್ಮಾನ್ ಅಝಹರಿ ಅವರನ್ನು ಕೂಡಲೇ ಬಿಡೆಗಡೆಗೊಳಿಸಬೇಕೆಂದು ಅಗ್ರಹಿಸಿ ಮಹಾಲಿಂಗಪುರದಲ್ಲಿ ಜಾಮೀಯ ಮಸೀದಿ ಸುನ್ನತ್ ಜಮಾತ್ ವತಿಯಿಂದ ಪ್ರತಿಭಟನೆ ನಡೆಸಿ ಪುರಸಭೆ ಮ್ಯಾನೇಜರ್ ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಮೌಲಾನಾ ಮಹಿರುಲ್ ಖಾದ್ರಿ,ಹುಸೇನ ಜಮಾದಾರ ಇದ್ದರು.
Published on

ಮಹಾಲಿಂಗಪುರ: ಮುಸ್ಲಿಂ ಧರ್ಮಗುರು ಮುಪ್ತಿಸಲ್ಮಾನ್ ಅಝಹರಿ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಸ್ಥಳೀಯ ಜಾಮೀಯಾ ಮಸೀದಿ ಸುನ್ನತ್ ಜಮಾತ್ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಪುರಸಭೆ ಮ್ಯಾನೇಜರ್ ಎಸ್. ಪಾಟೀಲ ಅವರಿಗೆ ಸಲ್ಲಿಸಲಾಯಿತು.

ಮುಖಂಡ ಾರುಕ್ ಪಕಾಲಿ ಮಾತನಾಡಿ,ಧರ್ಮಗುರುಗಳು ಪರಧರ್ಮ ಟೀಕಿಸಿದ್ದಾರೆಂದು ಸುಳ್ಳು ಆಪಾದನೆ ಹೊರಿಸಿ ಬಂಧಿಸಿದ್ದು,ಕೂಡಲೇ ಬಿಡುಗಡೆಗೊಳಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇದಕ್ಕೂ ಮುನ್ನ ಪ್ರತಿಭಟನಾಕಾರರು ಪಟ್ಟಣ ರಾಣಿ ಚನ್ನಮ್ಮ ವೃತ್ತದಿಂದ ಪ್ರತಿಭಟನೆಯಲ್ಲಿ ಪುರಸಭೆಗೆ ತೆರಳಿದರು.ಜಾಮೀಯ ಮಸೀದಿ ಸುನ್ನತ್ ಜಮಾತ್ ನ ಮೌಲಾನಾ ಮಹಿರುಲ್ ಖಾದ್ರಿ,ಹುಸೇನ್ ಜಮಾದಾರ,ಇಲಾಹಿ ಬಳಗಾರ,ಜಬಿಅಲ್ಲಾ ಮುಲ್ಲಾ,ಮೌಲಾಲಿ ಕೆಂಭಾವಿ,ಯಾಶೀನ್ ಮಾಲದಾರ,ಶಿರಾಜ ಬನಹಟ್ಟಿ,ಗನಿ ಸನದಿ, ಅಬ್ದುಲ್ ಕಡಕೋಳ,ಅಬ್ದುಲ್ ಆಲಗೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net