ಬೆಳೆ ವಿಮೆ ತಾರತಮ್ಯ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ

HKR PROTEST
Published on

ಹಿರೇಕೆರೂರ: ಮೆಕ್ಕೆಜೋಳ ಬೆಳೆ ವಿಮೆಯಲ್ಲಾದ ತಾರತಮ್ಯ ಸರಿಪಡಿಸುವುದು ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಸರ್ವಜ್ಞ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಸೋಮವಾರ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

ನೇತೃತ್ವ ವಹಿಸಿದ್ದ ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಈ ಕ್ಷೇತ್ರದಲ್ಲಿ 2023-24ರಲ್ಲಿ ಮೆಕ್ಕೆಜೋಳ ಬೆಳೆಗೆ ವಿಮೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿ ಕಾರಣವಾಗಿದೆ. ಸಾಂಖಿಕ ಅಧಿಕಾರಿ ಗುತ್ತಿಗೆ ಪಡೆದ ಬೆಳೆ ವಿಮೆ ಕಂಪನಿಯವರ ಜತೆಗೆ ಶಾಮೀಲಾಗಿ ಮನಬಂದತೆ ಸರ್ವೆ ನಡೆಸಿ, ಬೆಳೆ ವಿಮೆಯಲ್ಲಿ ರೈತರಿಗೆ ಭಾರಿ ವಂಚನೆ ಮಾಡಿದ್ದಾರೆ ಎಂದು ದೂರಿದರು.

ಅಧಿಕಾರಿಗಳು ಪ್ರಸಕ್ತ ಸಾಲಿನಲ್ಲಿ ಫಸಲು ಕಟಾವು ಆಗುವ ಮುಂಚೆ ಸಮೀಕ್ಷೆ ನಡೆಸಿ, ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕು. ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮನೆಗಳು ಧರೆಗುರುಳುತ್ತಿವೆ. ಈ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸೂಕ್ತ ಪರಿಹಾರ ದೊರಕಿಸಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಲಿಂಗರಾಜ ಚಪ್ಪರದಳ್ಳಿ, ಮಾಲತೇಶ ಗಂಗೋಳ, ಎನ್.ಎಂ. ಈಟೇರ, ಬಸಮ್ಮ ಅಬಲೂರ, ಪರಮೇಶ ಹಲಗೇರಿ, ಶಿವಕುಮಾರ ತಿಪ್ಪಶೆಟ್ಟಿ, ಆನದಂಪ್ಪ ಹಾದಿಮನಿ, ದೇವರಾಜ ನಾಗಣ್ಣನವರ ಮಾತನಾಡಿದರು.

ತಹಸೀಲ್ದಾರ್ ಪ್ರಭಾಕರಗೌಡ ಎಚ್., ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ, ಸಹಾಯಕ ತೋಟಗಾರಿಕೆ ಹಿರಿಯ ನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮಣ್ಣನವರ ಅವರಿಗೆ ಮನವಿ ಸಲ್ಲಿಸಲಾಯಿತು. ಪಪಂ ಸದಸ್ಯ ಹರೀಶ ಕಲಾಲ್, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಗೀತಾ ದಂಡಗೀಹಳ್ಳಿ, ಮಂಜುಳಾ ಬಾಳಿಕಾಯಿ, ಶಿವಲೀಲಾ ರಂಗಕ್ಕನವರ, ಮಂಜುಳಾ ಮುತ್ತಗಿ, ವಿಜಯಕುಮಾರ ಮಡಿವಾಳರ, ಪ್ರವೀಣ ತಳವಾರ, ಮನೋಹರ ವಡ್ಡಿನಕಟ್ಟಿ, ಹೊನ್ನಪ್ಪ ಸಾಲಿ, ಗಿರೀಶ ಬಿಳಕಿ, ಸತೀಶ ಕೋರಿಗೌಡ್ರ, ಜಗದೀಶ ದೊಡ್ಡಗೌಡ್ರ, ಲಕ್ಷ್ತ್ರ್ಮ ಪೂಜಾರ, ಬಸವರಾಜ ಭರಮಗೌಡ್ರ, ಪುಟ್ಟಣ್ಣ ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net