

ಗುರ್ಲಾಪುರ: ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ 3,500 ರೂ. ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಬೆಲೆ ನಿಗದಿ ಮಾಡುತ್ತಿಲ್ಲ. ಹೀಗಾಗಿ, ಈ ತಾರತಮ್ಯ ನೀತಿ ಖಂಡಿಸಿ ಅ.30 ರಂದು ಗುರ್ಲಾಪುರ ಕ್ರಾಸ್ ಬಂದ್ ಮಾಡಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಅಧ್ಯ ಚೂನಪ್ಪ ಪೂಜಾರಿ ಹೇಳಿದರು.
ಗ್ರಾಮದ ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ-ಧಿಕಾರಿಗಳು ಹಾಗೂ ಕಾರ್ಖಾನೆ ಮಾಲೀಕರು ಸ್ಥಳಕ್ಕೆ ಆಗಮಿಸಿ ಕಬ್ಬಿಗೆ ಬೆಲೆ ನಿಗದಿ ಮಾಡಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ರೈತ ಸಂದ ಪದಾಧಿಕಾರಿಗಳಾದ ಸತ್ಯಪ್ಪ ಮಲ್ಲಾಪುರ, ಶ್ರೀಶೈಲ ಅಂಗಡಿ, ಕುಮಾರ ಮರಡಿ, ಪಾಂಡು ಬಿರನಗಡ್ಡಿ, ಮಲ್ಲಪ್ಪ ಅಂಗಡಿ, ದುಂಡಪ್ಪ ಮುಗಳಖೋಡ, ಕೆ.ಆರ್.ದೇವರಮನಿ, ಚನ್ನಪ್ಪ ಮುಗಳಖೋಡ, ಭೀಮಪ್ಪ ದೇವರಮನಿ, ಶ್ರೀಶೈಲ ಕೌಜಲಗಿ, ಐ.ವೈ.ಮುಗಳಖೋಡ, ಶ್ರೀಶೈಲ ಮುಗಳಖೋಡ, ಈಶ್ವರ ಮುಗಳಖೋಡ, ರಂಗಪ್ಪ ಪಾಲಬಾವಿ, ಪ್ರಕಾಶ ಸುಳ್ಳನವರ, ಸದಾಶಿವ ನೇಮಗೌಡರ, ನಾಗರಾಜ ಮುಗಳಖೋಡ, ಮಲ್ಲಪ್ಪ ಮುಗಳಖೋಡ, ಹಾಲಸಿದ್ಧ ಮರಾಠೆ ಇತರರಿದ್ದರು.