ಪಿಂಚಣಿ ಪರಿಷ್ಕರಣೆಗೆ ಆಗ್ರಹಿಸಿ ಧರಣಿ

h11-protest
Published on

ಹುಬ್ಬಳ್ಳಿ: ನಿವೃತ್ತ ಬ್ಯಾಂಕ ನೌಕರರನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಧಾರವಾಡ ಜಿಲ್ಲಾ ನಿವೃತ್ತ ಬ್ಯಾಂಕ್ ನೌಕರರ ಸಂಘಟನೆ ವತಿಯಿಂದ ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿ ಪಕ್ಕದ ಅಂಬೇಡ್ಕರ ವೃತ್ತದಲ್ಲಿ ಶನಿವಾರ ಒಂದು ದಿನದ ಸಾಂಕೇತಿಕ ಧರಣಿ ಏರ್ಪಾಟಾಗಿತ್ತು.

ವಿಜಯಾ ಬ್ಯಾಂಕ್ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ವಿಶ್ವನಾಥ ಮಾತನಾಡಿ, ಕಾರ್ಮಿಕ ಮುಖಂಡರು ಪ್ರತಿಷ್ಠೆ ಬದಿಗಿಟ್ಟು ಸಂಘಟಿತರಾಗಿ ಹೋರಾಡಿದರೆ ಮಾತ್ರ ನಿವೃತ್ತ ನೌಕರರ ಬೇಡಿಕೆಗಳು ಈಡೇರುತ್ತವೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆ ನೌಕರರಿಗೆ ಕಾಲ ಕಾಲಕ್ಕೆ ದೊರೆಯುವ ವೇತನ ಪರಿಷ್ಕರಣೆ, ವೇತನ ಹೆಚ್ಚಳದ ಪ್ರಕಾರ ನಿವೃತ್ತಿ ನೌಕರರಿಗೂ ಅನ್ವಯವಾಗಬೇಕು. ಆರೋಗ್ಯ ವಿಮೆ ಮೇಲಿರುವ ಜಿಎಸ್‌ಟಿ ರದ್ದು ಮಾಡಬೇಕು. ವಿಮೆ ಸಬ್ಸಿಡಿ ಹೆಚ್ಚಳ, ಸರ್ಕಾರಿ ಬ್ಯಾಂಕ್ ನೌಕರರಿಗೆ ದೊರೆಯುವ ಎಕ್ಸಗ್ರೇಶಿಯಾ ಹಣವನ್ನು ಖಾಸಗಿ ಬ್ಯಾಂಕ್‌ಗಳಿಗೂ ವಿಸ್ತರಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಧರಣಿ ನಿರತರು ಆಗ್ರಹಿಸಿದರು.

ಧಾರವಾಡ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನಪ್ಪ ಝಳಕಿ, ವೆಂಕಟರಾವ್, ಎಂ.ಎಸ್. ಭಟ್ಟ, ಅಜಯಕುಮಾರ, ಎಸ್.ಬಿ. ಹುಬಳ್ಳಿಕರ, ಶಂಕರ ಅಜಮನಿ, ಮೇಘರಾಜ ಹಿರೇಮನಿ, ಪ್ರಕಾಶ ದೇಶಪಾಂಡೆ, ಬಿ.ಎನ್. ನಾಗಭೂಷಣ, ಜಿ.ಎಂ. ವೈದ್ಯ, ಮಲ್ಲಿಕಾರ್ಜುನ ಮಾದಿನೂರ, ಸ್ಟೀಪನ್, ರಾಘವ ಶೆಟ್ಟಿ, ಎಂ.ಎಸ್. ಭಟ್ಟಿ, ಡಿ.ಜಿ. ಶೆಟ್ಟಿ, ಶಿವಪುತ್ರಪ್ಪ ಪಡಸಲಮನಿ, ಅಶೋಕ ಜರಮನಿ, ಸಿ.ಎಂ. ಚನ್ನಬಸಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net